ಕರ್ನಾಟಕ

karnataka

ETV Bharat / entertainment

'ಮೈಂಡ್​ ಬ್ಲೋಯಿಂಗ್': 'ಅನಿಮಲ್​​' ಸಿನಿಮಾ, ನಟರನ್ನು ಕೊಂಡಾಡಿದ ಅಲ್ಲು ಅರ್ಜುನ್ - rashmika mandanna

Allu Arjun hails Animal movie and stars: ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ 'ಅನಿಮಲ್​​' ಸಿನಿಮಾವನ್ನು ಪುಷ್ಪ ಸ್ಟಾರ್ ಮೆಚ್ಚಿಕೊಂಡಿದ್ದಾರೆ.

Allu Arjun hails Animal movie and stars
'ಅನಿಮಲ್​​' ಸಿನಿಮಾ, ನಟರನ್ನು ಕೊಂಡಾಡಿದ ಅಲ್ಲು ಅರ್ಜುನ್

By ETV Bharat Karnataka Team

Published : Dec 8, 2023, 6:03 PM IST

ಚಿತ್ರಮಂದಿರಗಳಲ್ಲಿ 'ಅನಿಮಲ್​​' ಸಿನಿಮಾ ಧೂಳೆಬ್ಬಿಸುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​​ ಸಿನಿಮಾ ಮತ್ತು ನಟರನ್ನು ಕೊಂಡಾಡಿದ್ದಾರೆ. "ಸಿನಿಮ್ಯಾಟಿಕ್ ಬ್ರಿಲಿಯನ್ಸ್"ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪುಷ್ಪ ಸ್ಟಾರ್ ರಣ್​ಬೀರ್​ ಕಪೂರ್ ಅವರನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ ಎಕ್ಸ್‌ನಲ್ಲಿ ಅನಿಮಲ್​ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ''ಮೈಂಡ್​ ಬ್ಲೋಯಿಂಗ್" ಎಂದು ವರ್ಣಿಸಿದ್ದಾರೆ. ಕಥೆ ರವಾನಿಸಿದ ರೀತಿಯನ್ನು ಅವರು ಶ್ಲಾಘಿಸಿದರು. ರಣ್​​ಬೀರ್ ಕಪೂರ್​ಗೆ ಅಭಿನಂದನೆ ತಿಳಿಸಿದ್ದಾರೆ. ಭಾರತೀಯ ಸಿನಿಮಾ ಪ್ರದರ್ಶನಗಳನ್ನು ಅಭೂತಪೂರ್ವ ಮಟ್ಟಕ್ಕೇರಿಸಿದ್ದಾರೆ, ಪ್ರೇಕ್ಷಕರಿಗೆ ಅದ್ಭುತ ಸಿನಿಮಾ ಕೊಟ್ಟಿದ್ದಾರೆಂದು ತಮ್ಮ ಬರಹದಲ್ಲಿ ತಿಳಿಸಿದ್ದಾರೆ. ತೆರೆ ಮೇಲೆ ರಣ್​​ಬೀರ್ ಕಪೂರ್ ಸೃಷ್ಟಿಸಿದ ಮ್ಯಾಜಿಕ್ ಅನ್ನು ವರ್ಣಿಸಲು ಪದಗಳೇ ಸಾಲದು ಎಂದಿದ್ದಾರೆ.

''ಅನಿಮಲ್​​. ಜಸ್ಟ್ ಮೈಂಡ್​ ಬ್ಲೋಯಿಂಗ್. ನಿಮ್ಮ ಸಿನಿಮ್ಯಾಟಿಕ್​ ಬ್ರಿಲಿಯನ್ಸ್​ಗೆ ಮಾರುಹೋದೆ. ಅಭಿನಂದನೆಗಳು. ರಣ್​​ಬೀರ್​ ಕಪೂರ್​ ಜಿ, ಭಾರತೀಯ ಸಿನಿಮಾ ಪ್ರದರ್ಶನಗಳನ್ನು ಸಂಪೂರ್ಣವಾಗಿ ನೂತನ ಮಟ್ಟಕ್ಕೆ ಕೊಂಡೊಯ್ದಿದ್ದೀರಿ. ಬಹಳ ಸ್ಫೂರ್ತಿದಾಯಕವಾಗಿದೆ. ನಿಮ್ಮ ಮ್ಯಾಜಿಕ್ ಅನ್ನು ವಿವರಿಸಲು ನಿಜವಾಗಿಯೂ ಪದಗಳ ಕೊರತೆ ಇದೆ. ನಿಮ್ಮ ಈ ಉನ್ನತ ಹಂತಕ್ಕೆ ನನ್ನ ಗೌರವವಿದೆ'' - ಅಲ್ಲು ಅರ್ಜುನ್​.

ಇದನ್ನೂ ಓದಿ:ಬಿಗ್‌ ಬಾಸ್: ಸ್ನೇಹಿತ್‌ ಹೀಗೂ ಮಾಡಬಹುದಾ! ಸ್ನೇಹದಲ್ಲಿ ಬಿರುಕು?

''ರಶ್ಮಿಕಾ ಮಂದಣ್ಣ, ಬ್ರಿಲಿಯಂಟ್, ಮ್ಯಾಗ್ನೆಟಿಕ್. ಇದು ಈವರೆಗಿನ ನಿಮ್ಮ ಅತ್ಯುತ್ತಮ ಸಿನಿಮಾ. ಇನ್ನೂ ಹಲವು ಬರಬೇಕಿದೆ. ಬಾಬಿ ಡಿಯೋಲ್​​​ ಅವರ ಪವರ್​ಫುಲ್​ ಪರ್ಫಾಮೆನ್ಸ್ ನಮ್ಮನ್ನು ಮೌನಗೊಳಿಸಿತು. ನಿಮ್ಮ ಅದ್ಭುತ ಉಪಸ್ಥಿತಿ ಗೌರವ ನೀಡುತ್ತದೆ. ಅನಿಲ್ ಕಪೂರ್ ಜಿ, ನಿಮ್ಮ ನಟನೆ ಉತ್ತಮ, ನಿಮ್ಮ ಅನುಭವ ಸದ್ದು ಮಾಡುತ್ತಿದೆ ಸರ್. ಯಂಗ್​ ಲೇಡಿ ತೃಪ್ತಿ ಡಿಮ್ರಿ ಹೃದಯಗಳನ್ನು ಗೆದ್ದಿದ್ದೀರಿ'' ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಎಲ್ಲಾ ಇತರೆ ಕಲಾವಿದರು, ತಂತ್ರಜ್ಞರು ತಮ್ಮ ಅತ್ಯುತ್ತಮವಾದುದ್ದನ್ನು ನೀಡಿದ್ದಾರೆ, ಅಭಿನಂದನೆಗಳು ಎಂದು ಅಲ್ಲು ಅರ್ಜುನ್​​ ತಿಳಿಸಿದ್ದಾರೆ.

ಇದನ್ನೂ ಓದಿ:'ನಾವು ಅತ್ಯುತ್ತಮರು': ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್​​ನಲ್ಲಿ ಭಾರತದ ಪ್ರತಿಭೆಗಳ ಮಿಂಚು

ನಿರ್ದೇಶಕರ ಕೌಶಲ್ಯಕ್ಕೂ ಫುಲ್​ ಮಾರ್ಕ್​ ಕೊಟ್ಟಿದ್ದಾರೆ. ದಿ ಡೈರೆಕ್ಟರ್ ಸಂದೀಪ್​ ರೆಡ್ಡಿ ವಂಗಾ ಗಾರು, ಜಸ್ಟ್ ಮೈಂಡ್ ಬ್ಲೋಯಿಂಗ್. ನೀವು ಸಿನಿಮೀಯ ಮಿತಿಗಳನ್ನೆಲ್ಲಾ ಮೀರಿದ್ದೀರಿ. ಸಾಟಿಯಿಲ್ಲ. ಮತ್ತೊಮ್ಮೆ ನಮಗೆಲ್ಲಾ ಹೆಮ್ಮೆ ತಂದಿದ್ದೀರಿ. ನಿಮ್ಮ ಸಿನಿಮಾಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಭಾರತೀಯ ಚಿತ್ರರಂಗವನ್ನು ಹೇಗೆ ಬದಲಾಯಿಸಲಿವೆ ಎಂಬುದನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details