ನಟಿ ಅದಿತಿ ರಾವ್ ಹೈದರಿ ತಮ್ಮ ವದಂತಿಯ ಗೆಳೆಯ, ನಟ ಸಿದ್ಧಾರ್ಥ್ ಅವರೊಂದಿಗಿನ 'ಪ್ರೇಮಭರಿತ' ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ 2024 ಅನ್ನು ಸ್ವಾಗತಿಸಿದ್ದಾರೆ. ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಕಾತೆಯಲ್ಲಿ ಒಂದೇ ಫೋಟೋ ಹಂಚಿಕೊಂಡು, ಅಭಿಮಾನಿಗಳಿಗೆ 'ಹೊಸ ವರ್ಷದ ಶುಭಾಶಯ' ಕೋರಿದ್ದಾರೆ. ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಆಗಾಗ್ಗೆ ಸಿನಿಮಾ ಈವೆಂಟ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ 'ಪ್ರೀತಿ'ಯಿಂದ ಕೂಡಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಹಾಗಾಗಿ ಈ ಜೋಡಿ ಪ್ರೀತಿಯಲ್ಲಿರುವುದಾಗಿ ಬಹುತೇಕ ನೆಟ್ಟಿಗರು ನಂಬಿದ್ದಾರೆ.
ತಾವು ಡೇಟಿಂಗ್ನಲ್ಲಿರುವುದಾಗಿ ಮತ್ತೊಮ್ಮೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಈ ಇಬ್ಬರೂ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುಂದರ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಕ್ಯಾಪ್ಷನ್, ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿರುವಂತಿದೆ. 2024 ಮ್ಯಾಜಿಕ್, ಸಂತೋಷ, ಪ್ರೀತಿ, ನಗು, ಮಳೆಬಿಲ್ಲಿನಿಂದ ತುಂಬಿರಲಿ ಎಂದು ಬರೆದುಕೊಂಡಿದ್ದಾರೆ. ಅದಿತಿ ಮತ್ತು ಸಿದ್ಧಾರ್ಥ್ ತಮ್ಮ ನ್ಯೂ ಇಯರ್ ವೆಕೇಶನ್ ಸಂದರ್ಭ ಚಳಿಗಾಲದ ಉಡುಗೆಗಳನ್ನು ಧರಿಸಿ, ಬಹಳ ಸಂತೋಷದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಇಬ್ಬರೂ ಸೇಮ್ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಫೋಟೋ ಯುರೋಪ್ ಪ್ರವಾಸದ ಸಂದರ್ಭ ಕ್ಲಿಕ್ಕಿಸಿದಂತೆ ತೋರುತ್ತಿದೆ.
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ 2021ರಲ್ಲಿ ಬಂದ ತೆಲುಗು ಚಿತ್ರ ''ಮಹಾ ಸಮುದ್ರಂ''ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಡೇಟಿಂಗ್ ಪ್ರಾರಂಭಿಸಿದರು ಎಂದು ವರದಿಗಳು ಸೂಚಿಸಿವೆ. ಅಂದಿನಿಂದ ಸಾರ್ವಜನಿಕವಾಗಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಹಂಚಿಕೊಳ್ಳುತ್ತಾ ಬಂದಿದ್ದಾರೆ. ತಮ್ಮ ರಿಲೇಶನ್ಶಿಪ್ ಅನ್ನು ಅಧಿಕೃತವಾಗಿ ದೃಢೀಕರಿಸದೇ ಇದ್ದರೂ ತಮ್ಮನ್ನು ಪರಸ್ಪರ 'ಪಾರ್ಟನರ್ಸ್' ಎಂದು ಉಲ್ಲೇಖಿಸುತ್ತಾರೆ.