ಬಹುನಿರೀಕ್ಷಿತ ಜುಬ್ಲಿ ( Jubilee) ಸರಣಿ ಇಂದು( ಏಪ್ರಿಲ್ 7) ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಪ್ರಾರಂಭಿಸಿದೆ. ಗುರುವಾರ ರಾತ್ರಿ ಈ ಸೀರಿಸ್ನ ಪ್ರಥಮ ಪ್ರದರ್ಶನ ನಡೆಯಿತು. ಸೀರಿಸ್ನ ಪಾತ್ರಧಾರಿ ನಟಿ ಅದಿತಿ ರಾವ್ ಹೈದರಿ ಜುಬ್ಲಿ ಪ್ರಥಮ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಸಂಪೂರ್ಣ ಬ್ಲ್ಯಾಕ್ ಡ್ರೆಸ್ನಲ್ಲಿ ಕಂಗೊಳಿಸುತ್ತಿದ್ದರು. ಮುಂಬೈನಲ್ಲಿ ನಡೆದ ಜುಬ್ಲಿ ಪ್ರೀಮಿಯರ್‌ನಲ್ಲಿ ತಮ್ಮ ವದಂತಿಯ ಗೆಳೆಯ ಸಿದ್ಧಾರ್ಥ್ ಜೊತೆಗಿದ್ದರು. ಜುಬಿಲಿ ಪ್ರೀಮಿಯರ್ ನೈಟ್‌ನಿಂದ ಸಿದ್ಧಾರ್ಥ್ ಮತ್ತು ಅವರ ತಂಡದೊಂದಿಗಿನ ಚಿತ್ರವನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳೀಗ ವೈರಲ್ ಅಗುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಂಡ ನಟಿ ಅದಿತಿ ರಾವ್ ಹೈದರಿ, "ಇದು ನಾವು, ಅತ್ಯಂತ ಪ್ರೀತಿಪಾತ್ರರು, ಧನ್ಯವಾದಗಳು ನನ್ನ ಪ್ರಿಯ ಜನರಿಗೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ, ಹಮ್ ಸಾಥ್ ಸಾಥ್ ಹೈ, ಕೆಲಸವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. ಸಿದ್ಧಾರ್ಥ್ ಮತ್ತು ಇತರ ಸ್ನೇಹಿತರೊಂದಿಗೆ ಪೋಸ್ ಕೊಟ್ಟ ಸುಂದರ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
ನಟಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಸಾಮಾನ್ಯವಾಗಿ ಪರಸ್ಪರರ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಡೇಟಿಂಗ್ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಜುಬ್ಲಿ ಪ್ರೀಮಿಯರ್‌ನಲ್ಲಿ ಸಿದ್ಧಾರ್ಥ್ ಅವರ ಉಪಸ್ಥಿತಿಯು ಮತ್ತಷ್ಟು ಊಹಾಪೋಹ ಏಳಲು ಕಾರಣವಾಗಿದೆ. ಆದರೆ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಸುತ್ತಲಿನ ಊಹಾಪೋಹಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಜುಬ್ಲಿ ಪ್ರೀಮಿಯರ್‌ನಿಂದ ಅದಿತಿ ಮತ್ತು ಸಿದ್ಧಾರ್ಥ್ ಅವರ ಫೋಟೋ ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಡುತ್ತಿದೆ. ಈ ಜೋಡಿಯು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಿಗೆ ಪೋಸ್ ನೀಡುತ್ತಿರುವಾಗ, "ಕ್ಯಾ ಬಾತ್ ಹೈ ಏಕ್ ಸಾಥ್? ಲವ್ಲಿ ಜೋಡಿ" ಎಂದು ಪಾಪರಾಜಿಗಳು ಹೇಳುತ್ತಿದ್ದಂತೆ ಅದಿತಿ ರಾವ್ ಹೈದರಿ ನಾಚಿ ನೀರಾದರು. ಈ ಚಿತ್ರಗಳನ್ನು ನೋಡಿದ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೀತಿ ಬಗ್ಗೆ ಅಧಿಕೃತ ಮಾಹಿತಿ ಕೊಡುವಂತೆ ಕೇಳುತ್ತಿದ್ದಾರೆ.