ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಎಂದು ಶೈನ್ ಆದ ನಟಿ ರಶ್ಮಿಕಾ ಮಂದಣ್ಣ ಈಗ ಟೀಕೆಗಳ ಮಳೆಗೆ ತತ್ತರಗೊಂಡಿದ್ದಾರೆ. ಸಿನಿಮಾ, ಅಭಿನಯ ಚೆನ್ನಾಗಿದ್ದರೂ ಟೀಕೆ, ಟ್ರೋಲ್ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ದಕ್ಷಿಣ ಸಿನಿಮಾ ರಂಗದ ಬಗ್ಗೆ ರಶ್ಮಿಕಾ ಹೇಳಿಕೆ ಕೊಟ್ಟಿದ್ದು ದಕ್ಷಿಣ ಭಾರತ ಸಿನಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಿಷನ್ ಮಜ್ನು ಸಾಂಗ್ ರಿಲೀಸ್:ನಟಿ ರಶ್ಮಿಕಾ ಮಂದಣ್ಣ ಅವರು ಡಿಸೆಂಬರ್ 25ರಂದು ತಮ್ಮ ಮುಂಬರುವ ಹಿಂದಿ ಭಾಷೆಯ ಮಿಷನ್ ಮಜ್ನು ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಬ್ಬಾ ಜಂಡಾ ಹಾಡು ಬಿಡುಗಡೆ ಸಮಾರಂಭದಲ್ಲಿ ಅವರು ನೀಡಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಾಧ್ಯಮ ಸಂವಾದದ ಸಂದರ್ಭದಲ್ಲಿ, ರಶ್ಮಿಕಾ ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳ ಬಗ್ಗೆ ಹೊಗಳಿದರು. ಆದರೆ, ಅವರ ಸೌತ್ ಸಿನಿಮಾ ಬಗೆಗಿನ ಹೇಳಿಕೆ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಬಾಲಿವುಡ್ ರೊಮ್ಯಾಂಟಿಕ್ ಸಾಂಗ್:ರಶ್ಮಿಕಾ ಅವರು ಬಾಲಿವುಡ್ ಐಕಾನಿಕ್ ರೊಮ್ಯಾಂಟಿಕ್ ಸಾಂಗ್ಗಳಲ್ಲಿ ನಿಮ್ಮನ್ನು ನೀವು ಎಂದಾದರೂ ಕಲ್ಪಿಸಿಕೊಂಡಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ನಟಿ ತಮ್ಮ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡಿನ ಬಗ್ಗೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.
ಬಾಲಿವುಡ್ ಬೆಸ್ಟ್:ರೊಮ್ಯಾಂಟಿಕ್ ಹಾಡುಗಳನ್ನು ನಿರ್ಮಾಣ ಮಾಡುವುದರಲ್ಲಿ ಬಾಲಿವುಡ್ ಬೆಸ್ಟ್. ಚಿಕ್ಕಂದಿನಿಂದಲೂ ಈ ಹಾಡುಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ರೊಮ್ಯಾಂಟಿಕ್ ಹಾಡುಗಳಿಗೆ ಬಾಲಿವುಡ್ ಹೆಸರುವಾಸಿ. ದಕ್ಷಿಣ ಚಿತ್ರರಂಗದಲ್ಲಿ ಮಾಸ್ ಮಸಾಲಾ, ಐಟಂ ನಂಬರ್ಸ್ ಮತ್ತು ಡ್ಯಾನ್ಸ್ ನಂಬರ್ಸ್ ಇವೆ ಎಂದರು. ಜೊತೆಗೆ ಇದು ನನ್ನ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡು. ಸಾಂಗ್ ತುಂಬಾ ಚೆನ್ನಾಗಿದೆ. ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.