ETV Bharat Karnataka

ಕರ್ನಾಟಕ

karnataka

ETV Bharat / entertainment

'ಶೀಘ್ರದಲ್ಲೇ ನಮ್ಮ ಊರಿನಲ್ಲಿ ಸಿಗೋಣ'.. ಮೋಹಕತಾರೆ ರಮ್ಯಾ ಟ್ವೀಟ್​ - Ramya heart attack

Actress Ramya Tweet: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುರಿತಾದ ವದಂತಿ ಬೆನ್ನಲ್ಲೇ ಸ್ವತಃ ನಟಿ ರಮ್ಯಾ ಟ್ವೀಟ್​ ಮಾಡಿದ್ದಾರೆ.

Actress Ramya Tweet
ನಟಿ ರಮ್ಯಾ ಟ್ವೀಟ್​
author img

By ETV Bharat Karnataka Team

Published : Sep 6, 2023, 4:24 PM IST

Updated : Sep 6, 2023, 8:40 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಹುಭಾಷೆ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮಿಂಚಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಆರೋಗ್ಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಫೇಕ್​​ ಸುದ್ದಿಯೊಂದು ಹರಿದಾಡಿತ್ತು. ಈ ಸುದ್ದಿ ತಿಳಿದ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.

ಯಾರೋ ಕಿಡಿಗೇಡಿಗಳು ನಟಿ ರಮ್ಯಾ ಮೃತರಾಗಿದ್ದಾರೆಂದು ಟ್ಟೀಟ್ ಮಾಡಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿತ್ತು. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ನ್ಯೂಸ್ ಆಗಿತ್ತು. ಆದರೆ, ಇದು ಸುಳ್ಳು ಸುದ್ದಿಯಾಗಿದ್ದು, ರಮ್ಯಾ ಯಾವುದೇ ತೊಂದರೆ ಇಲ್ಲದೇ ಆರೋಗ್ಯವಾಗಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿದ್ದವು‌. ಸ್ವಲ್ಪ ಹೊತ್ತಿನಲ್ಲಿ ರಮ್ಯಾ ಒಂದು ವಿಡಿಯೋ ಅಥವಾ ಟ್ಟೀಟ್ ಮೂಲಕ ನಾನು ಚೆನ್ನಾಗಿ ಇದ್ದೇನೆ ಎಂದು ತಿಳಿಸಲಿದ್ದಾರೆ ಅಂತಾ ರಮ್ಯಾ ಆಪ್ತರೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದರು.

ಯುರೋಪ್​ ಪ್ರವಾಸದಲ್ಲಿರುವ ರಮ್ಯಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಆಪ್ತರು ಬರೆದುಕೊಂಡಿದ್ದರು. ರಮ್ಯಾ ಅವರನ್ನು ಜಿನೇವಾದಲ್ಲಿ ಭೇಟಿಯಾದ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಶೇರ್​ ಮಾಡಿದ್ದರು. ತಮ್ಮೊಂದಿಗಿನ ಫೋಟೋ ಶೇರ್ ಮಾಡಿರುವ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ರಮ್ಯಾ, ಶೀಘ್ರದಲ್ಲೇ ನಮ್ಮೂರಲ್ಲಿ ಸಿಗೋಣ ಎಂದು ರಿಪ್ಲೇ ಮಾಡಿದ್ದಾರೆ. ಈ ಮೂಲಕ ಮೋಹಕತಾರೆ ರಮ್ಯಾ ಅಭಿಮಾನಿಗಳ ಚಿಂತೆ ದೂರ ಮಾಡಿದ್ದಾರೆ. ಈ ಫೇಕ್​ ಸುದ್ದಿ ಹರಡಿರುವವರ ವಿರುದ್ಧ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.

ಇದನ್ನೂ ಓದಿ:ಸಿಬ್ಬಂದಿ ಮದುವೆಯಲ್ಲಿ ನ್ಯಾಷನಲ್ ಕ್ರಶ್.. ಒಂದೇ ಲೊಕೇಶನ್​ನಲ್ಲಿ ವಿಜಯ್​, ರಶ್ಮಿಕಾ ಫೋಟೋ - ಅಭಿಮಾನಿಗಳಲ್ಲಿ ಗೊಂದಲ

ಈ ಬಗ್ಗೆ ತಮಿಳುನಾಡು ಕಾಂಗ್ರೆಸ್​ನ ಐಟಿ ಸೆಲ್​ ಚೇರಮನ್​ ಕೆ.ಟಿ ಲಕ್ಷ್ಮಿಕಾಂತನ್​ ಅವರೂ ಕೂಡ ರಮ್ಯಾ ಆರೋಗ್ಯವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ''ನಮ್ಮ ಪ್ರೀತಿಯ ಮಾಜಿ ಸಾಮಾಜಿಕ ಮಾಧ್ಯಮ ಅಧ್ಯಕ್ಷೆ ರಮ್ಯಾ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ವದಂತಿಗಳು ಮತ್ತು ಕೆಲವು ಟಿವಿ ಚಾನೆಲ್​ನಲ್ಲಿನ ಸುದ್ದಿಗಳು ಶೇಕಡಾ ನೂರರಷ್ಟು ತಪ್ಪು'' ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿದ್ದಾರೆ. ಕಾಂಗ್ರೆಸ್​ ಪಕ್ಷದ ಸಾಮಾಜಿಕ ಜಾಲತಾಣ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಎಂಬ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಸ್ಯಾಂಡಲ್​ವುಡ್​ಗೆ ರಮ್ಯಾ ಮರಳಿದ್ದಾರೆ.

ಇದನ್ನೂ ಓದಿ:Amulya: ಪುಟ್ಟ ಕೃಷ್ಣರಾದ ಅಮೂಲ್ಯ ಮಕ್ಕಳು.. ಅಷ್ಟಮಿ ಸಂಭ್ರಮ ಹೆಚ್ಚಿಸಿದ ನಟಿಯ ಪುತ್ರರ ಫೋಟೋ

Last Updated : Sep 6, 2023, 8:40 PM IST

ABOUT THE AUTHOR

...view details