ಕೆಜಿಎಫ್ ಚಾಪ್ಟರ್ 2 ಚಿತ್ರದ ದೊಡ್ಡ ಮಟ್ಟದ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್, ಮುಂದಿನ ಸಿನಿಮಾ ಯಾವುದು?, ಯಾವ ನಿರ್ದೇಶಕನ ಜತೆ ಎಂಬ ಬಗ್ಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಆದರೆ ಯಶ್ ಮಾತ್ರ ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ ಯಶ್ ಜೊತೆ ಗೋವಾದಲ್ಲಿ ಕೆಲ ದಿನಗಳು ರಿಲ್ಯಾಕ್ಸ್ ಮೂಡ್ನಲ್ಲಿದ್ದರು.
ರಾಧಿಕಾ ಪಂಡಿತ್ ಹಾಗೂ ಯಶ್ ಇಷ್ಟು ದಿನ ಸಿನಿಮಾ ಪ್ರಮೋಷನ್ಗಾಗಿ, ಕೆಜಿಎಫ್ ಚಿತ್ರತಂಡದ ಜತೆ ಮುಂಬೈ, ದೆಹಲಿ, ಚೆನ್ನೈ, ಕೊಚ್ಚಿ ಅಂತಾ ಸುತ್ತಾಡಿ ಸಿನಿಮಾ, ಪ್ರಮೋಷನ್ ಮಾಡಿದ್ದ ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂ. ಕಲೆಕ್ಷನ್ ಮಾಡಿದ ಮೇಲೆ ಫುಲ್ ಜಾಲಿ ಮೂಡ್ನಲ್ಲಿದ್ದಾರೆ.
ಆಗಾಗ ಮಕ್ಕಳ ಜೊತೆ ಯಶ್ ಆಟ ಆಡುವ ವಿಡಿಯೋಗಳನ್ನ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯಶ್ ಬಿಡುವು ಮಾಡಿಕೊಂಡು, ಮಗಳು ಐರಾ, ಮಗ ಯಥರ್ವ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಜತೆ ಕಾಲ ಕಳೆಯುತ್ತಿದ್ದಾರೆ.
ಸದ್ಯ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್ ಭೇಟಿ ಕೊಟ್ಟಿದ್ದಾರೆ. ಅಲ್ಲಿರುವ ಪರಿಸರ ಹಾಗೂ ವಿಭಿನ್ನ ಬಗೆಯ ಪ್ರಾಣಿ ಪಕ್ಷಿಗಳನ್ನ ನೋಡಿ ಎಂಜಾಯ್ ಮಾಡಿದ್ಧಾರೆ. ಮುಖ್ಯವಾಗಿ ಯಶ್ ಮಗಳು ಐರಾ ಮುದ್ದಾದ ಗಿಣಿಗಳಿಗೆ ಊಟ ತಿನ್ನಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಕಡೆ ರಾಧಿಕಾ ಪಂಡಿತ್ ಕೂಡ ಗಿಣಿಗಳಿಗೆ ಕಾಳು ತಿನ್ನಿಸಿ ಖುಷಿ ಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ನೋಡಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕೆಜಿಎಫ್ 2; ಭಾವನಾತ್ಮಕ ವಿಡಿಯೋ ಹರಿಬಿಟ್ಟ ಯಶ್