ಬಾಲಿವುಡ್ ಪವರ್ಫುಲ್ ಕಪಲ್ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ನವೆಂಬರ್ 6ರಂದು ಪೋಷಕರಾಗಿ ಭಡ್ತಿ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದು ಮುಂಬೈನ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್ ಆಗಿ ಬಾಂದ್ರಾ ನಿವಾಸ ತಲುಪಿದ್ದು, ಕುಟುಂಬಸ್ಥರಲ್ಲಿ ಸಂತಸ ದುಪ್ಪಟ್ಟಾಗಿದೆ.
ಕಳೆದ ಏಪ್ರಿಲ್ 14ರಂದು ಬಾಂದ್ರಾ ನಿವಾಸದಲ್ಲಿ ನಟ ರಣ್ಬೀರ್ ಕಪೂರ್ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ ನಟಿ ಆಲಿಯಾ ಭಟ್ ನವೆಂಬರ್ 6ರಂದು ಬೆಳಗ್ಗೆ 7:30ಕ್ಕೆ ಮುಂಬೈನ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ತಲುಪಿ, ಮಧ್ಯಾಹ್ನ 12 ಗಂಟೆ ಹೊತ್ತಿಗೆ ಪುತ್ರಿಗೆ ಜನ್ಮ ನೀಡಿದರು. ನಾಲ್ಕು ದಿನಗಳ ಬಳಿಕ ಇಂದು ಆಸ್ಪತ್ರೆಯಿಂದ ಮನೆಗೆ ತಲುಪಿದ್ದು, ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಆಲಿಯಾ ಅವರ ಮುಖದಲ್ಲಿ ತಾಯಿಯಾಗಿರುವ ಹೊಳಪು ಗೋಚರಿಸಿದೆ. ಆಲಿಯಾ ಮೊದಲ ಬಾರಿಗೆ ಮೇಕಪ್ ಇಲ್ಲದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.