ಕರ್ನಾಟಕ

karnataka

ETV Bharat / entertainment

ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್: ಮೊದಲ ಮಗುವಿನ ನಿರೀಕ್ಷೆಯಲ್ಲಿ 'ರಾಲಿಯಾ' ದಂಪತಿ - Alia bhatt delivery

ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಮುಂಬೈನ ಹೆಚ್​​.ಎನ್​​​ ರಿಲಯನ್ಸ್​​​​​ ಆಸ್ಪತ್ರೆಗೆ ಮುಂಜಾನೆ ತಲುಪಿದ್ದಾರೆ. ಆಲಿಯಾ ಇಂದೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ.

actress Alia bhat admitted hospital
ಮಗುವಿನ ನಿರೀಕ್ಷೆಯಲ್ಲಿ ರಾಲಿಯಾ ದಂಪತಿ

By

Published : Nov 6, 2022, 12:24 PM IST

ಬಾಲಿವುಡ್​​ ತಾರಾ ದಂಪತಿ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್ ತಮ್ಮ​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೆರಿಗೆ ದಿನಾಂಕ ಹತ್ತಿರ ಬಂದಿದ್ದು, ಆಲಿಯಾ ಭಟ್ ಅವರನ್ನು​​ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೂಪರ್​ ಹಿಟ್​ 'ಬ್ರಹ್ಮಾಸ್ತ್ರ' ಕಪಲ್​​ 'ರಾಲಿಯಾ' ಮುಂಬೈನ ಹೆಚ್​​.ಎನ್​​​ ರಿಲಯನ್ಸ್​​​​ ಆಸ್ಪತ್ರೆಗೆ ಮುಂಜಾನೆ ತಲುಪಿದ್ದಾರೆ. ಆಲಿಯಾ ಇಂದೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಇಬ್ಬರ ಕುಟುಂಬಸ್ಥರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್

ಬಹು ದಿನಗಳ ಕಾಲ ಡೇಟಿಂಗ್​​ ನಡೆಸಿ ಬಾಲಿವುಡ್​ನ ಪ್ರಣಯ ಪಕ್ಷಿಗಳಾಗಿ ಗುರುತಿಸಿಕೊಂಡ ಈ ಜೋಡಿ ಏಪ್ರಿಲ್​​ 14ರಂದು ಮುಂಬೈನ ಬಾಂದ್ರಾದ ಮನೆಯಲ್ಲಿಯೇ ಸ್ನೇಹಿತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ, ಜೂನ್​​ 27ರಂದು ತಾವು ಪೋಷಕರಾಗಲಿದ್ದೇವೆ ಎಂಬ ಶುಭ ಸುದ್ದಿ ಹಂಚಿಕೊಂಡಿದ್ದರು. ಇತ್ತೀಚೆಗೆ ಮನೆಯಲ್ಲಿಯೇ ಸರಳವಾಗಿ ಆಲಿಯಾ ಅವರ ಸೀಮಂತ ಶಾಸ್ತ್ರವೂ ನಡೆದಿತ್ತು.

ಇದನ್ನೂ ಓದಿ:'ವೆಸ್ಟಿಬುಲರ್ ಹೈಪೋಫಂಕ್ಷನ್' ಸಮಸ್ಯೆಯಿಂದ ಬಳಲುತ್ತಿರುವ ನಟ ವರುಣ್ ಧವನ್

ABOUT THE AUTHOR

...view details