ಕರ್ನಾಟಕ

karnataka

ETV Bharat / entertainment

'ನಮ್ಮ ಮದುವೆಗೆ ಬನ್ನಿ..': ಮನಬಿಚ್ಚಿ ಮಾತನಾಡಿದ ವಸಿಷ್ಠ ಸಿಂಹ, ಹರಿಪ್ರಿಯಾ

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಹಾಗು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ವಸಿಷ್ಠ ಸಿಂಹ ಹಾಗು ಹರಿಪ್ರಿಯಾ ಹೇಳಿದ್ದಾರೆ.

vasishta simha and haripriya
ಸಿಂಹಪ್ರಿಯಾ

By

Published : Jan 12, 2023, 8:54 AM IST

ಮದುವೆಯ ಮಮತೆಯ ಕರೆಯೋಲೆ: ಮಾಧ್ಯಮದ ಮುಂದೆ ತಮ್ಮ ಮದುವೆಯ ಮಾಹಿತಿ ನೀಡಿದ ನಟ ವಸಿಷ್ಠ ಸಿಂಹ ಹಾಗು ನಟಿ ಹರಿಪ್ರಿಯಾ

ಕನ್ನಡದ ಚಿತ್ರರಂಗದ ಪ್ರತಿಭಾವಂತ ತಾರಾ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ ದಿನ ಸಮೀಪಿಸುತ್ತಿದೆ. ಈ ಹಿಂದೆ ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡು ತಾವು ಪ್ರೇಮಿಗಳೆಂದು ಎಂದು ಸಾಬೀತು ಮಾಡಿದ್ದ ಜೋಡಿ, ಇದೀಗ ‌ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ. ಈ ಬಗ್ಗೆ ಬುಧವಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿ, ವಿವಾಹಕ್ಕೆ ಆಹ್ವಾನ ನೀಡಿದರು.

'ಅದ್ಧೂರಿಯಾಗಿ ಮದುವೆ ಆಗ್ತಿದ್ದೀವಿ': ನಟ ವಸಿಷ್ಠ ಸಿಂಹ ಮಾತನಾಡಿ, 'ನಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ಕನ್ನಡ ಚಿತ್ರರಂಗದವರಿಗೆ ಅಷ್ಟೊಂದು ಗೊತ್ತಿಲ್ಲ. ನಾವು ಲವ್ ಮಾಡಿದ್ದು, ಈಗ ಅರೆಂಜ್ ಮ್ಯಾರೇಜ್ ಆಗಿದೆ. ಮನೆಯವರು ಜಾಸ್ತಿ ಇನ್ವಾಲ್ ಆಗಿ ಮದುವೆ ಮಾಡುತ್ತಿದ್ದಾರೆ. ಇದೇ ಜನವರಿ 26ಕ್ಕೆ ಮದುವೆ ದಿನಾಂಕವನ್ನು ಎರಡು‌ ಕುಟುಂಬದವರು ನಿಗದಿ ಮಾಡಿದ್ದಾರೆ. ನಾವು ಸರಳವಾಗಿ ಮದುವೆ ಆಗುತ್ತಿಲ್ಲ, ತುಂಬಾ ಅದ್ಧೂರಿಯಾಗಿ ಮದುವೆ ಆಗುತ್ತಿದ್ದೇವೆ.'

'ಪ್ರೀತಿಸಿದ ನಂತರ ನಾಯಿಮರಿ ಕೊಟ್ಟೆ': 'ಬೆಂಗಳೂರಿನಲ್ಲಿ ಜನವರಿ 28 ರಂದು ಸಿನಿಮಾ‌ ಇಂಡಸ್ಟ್ರಿಯವರಿಗೆ ಆರತಕ್ಷತೆ ಇರುತ್ತದೆ‌. ಮೈಸೂರಿನಲ್ಲಿ ಮದುವೆ ನಡೆಯುತ್ತದೆ. ಏರ್‌ಪೋರ್ಟ್ ಫೋಟೋ, ಎಂಗೇಜ್​ಮೆಂಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದನ್ನು ನೋಡಿದೆ. ನಾನು ನಾಯಿ ಮರಿ ಕೊಟ್ಟು ಹುಡುಗಿ ಪಟಾಯಿಸಿಕೊಂಡು ಬಿಟ್ಟೆ ಅಂತ ಕೆಲವರು ಹೇಳಿದ್ರು. ಆದ್ರೆ, ನಾನು ಪ್ರೀತಿಸಿದ ನಂತರ ನಾಯಿಮರಿ ಕೊಟ್ಟೆ ಎಂದು ಹರಿಪ್ರಿಯಾ ಜೊತೆಗಿನ‌ ಲವ್ ಸ್ಟೋರಿ ಬಗ್ಗೆ ಹೇಳಿದರು.

ಇದನ್ನೂ ಓದಿ:ಮಲ್ಪೆ ಕಡಲ ತೀರದಲ್ಲಿ 'ಲವ್ ಲಿ' ವಸಿಷ್ಠ ಸಿಂಹ: ಮುಂದಿನ ಶೂಟಿಂಗ್ ಲಂಡನ್​ನಲ್ಲಿ

'ನಮ್ಮದು ಮೂರು ವರ್ಷದ ಪ್ರೇಮ್ ಕಹಾನಿ':'ಹರಿಪ್ರಿಯಾ ಜೊತೆ ಮಾತು‌ಕತೆ ಶುರುವಾಗಿದ್ದು 2016 ರಲ್ಲಿ. ಬಳಿಕ ಇಬ್ಬರ ನಡುವೆ ಸ್ನೇಹ ಶುರುವಾಯ್ತು. ನಾನು ಆಗ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ‌ ಮಾಡಿದೆ. ಆ ಸಿನಿಮಾವನ್ನು ಹರಿಪ್ರಿಯಾ ನೋಡಿ ನನಗೆ ವಿಶ್ ಮಾಡಿದ್ದರು. ಆಗ ನನಗೆ ನಿಜವಾಗ್ಲೂ ಅಚ್ಚರಿ ಅನಿಸಿತ್ತು. ಯಾಕೆಂದರೆ, ಹರಿಪ್ರಿಯಾ ಆಗಲೇ ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ‌ ಸ್ಟಾರ್ ನಟಿಯಾಗಿ‌ ಗುರುತಿಸಿಕೊಂಡಿದ್ದರು. ಅಂಥವರು ನನ್ನ ಸಿನಿಮಾ ನೋಡಿ ನನಗೆ ವಿಶ್ ಮಾಡಿದ್ದು ಇಷ್ಟ ಆಯಿತು. ಅಲ್ಲಿಂದ ಪರಿಚಯ ಶುರುವಾಯಿತು. ನಮ್ಮದು‌ ಮೂರು ವರ್ಷದ ಲವ್ ಸ್ಟೋರಿ' ವಸಿಷ್ಠ ಸಿಂಹ ಹೇಳಿದರು.

ಇದನ್ನೂ ಓದಿ:ಕನ್ನಡದ ತಾರಾಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ದಿನಾಂಕ ಫಿಕ್ಸ್

'ಹರಿಪ್ರಿಯಾ ತಂದೆಯ ಪುಣ್ಯತಿಥಿಯಂದು ಪ್ರಪೋಸ್ ಮಾಡಿದೆ': 'ಪ್ರೀತಿ, ಮದುವೆ ವಿಚಾರದಲ್ಲಿ ನಮ್ಮದೇ ಪ್ಯಾಟರ್ನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ. ಹಾಗಾಗಿ, ಅಲ್ಲೇ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ತುಂಬಿದ್ದಾರೆ. ಕಾಲೇಜು ದಿನಗಳಲ್ಲಿ ಹರಿಪ್ರಿಯಾ ಸಿನಿಮಾಗಳನ್ನು ನೋಡಿ ಅಭಿಮಾನಿಯಾದೆ. ನಾನು ಹರಿಪ್ರಿಯಾ ಒಂದು ವರ್ಷಗಳ ಕಾಲ ಸ್ನೇಹಿತರಾಗಿ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇವೆ. ಹರಿಪ್ರಿಯಾ ತಂದೆಯ ಪುಣ್ಯತಿಥಿಯೆಂದು ನಾನು ಮೊದಲು ಲವ್ ಪ್ರಪೋಸ್ ಮಾಡಿದ್ದು' ಎಂದು ವಸಿಷ್ಠ ಸಿಂಹ ತಿಳಿಸಿದರು.

'ತಂದೆಯ ಗುಣಗಳನ್ನು ವಸಿಷ್ಠ ಸಿಂಹನಲ್ಲಿ ನೋಡಿದೆ': 'ಇಂದು ಮದುವೆ ಬಗ್ಗೆ ಮಾತನಾಡೋಕೆ ತುಂಬಾ ಭಯ ಆಗ್ತಿದೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ. ನಮ್ಮ ಎಂಗೇಜ್ಮೆಂಟ್ ಮತ್ತು ಪ್ರೀತಿನ ಹೇಳಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಆಗಲಿಲ್ಲ. ಅದಕ್ಕೆ ಈಗ ನಮ್ಮ ಮದುವೆ ಬಗ್ಗೆ ಎಲ್ಲಾ ಮಾಹಿತಿ ಕೊಡಲು ನಿಮ್ಮ ಮುಂದೆ ಬಂದಿದ್ದೇವೆ. ನಾನು ಚಿಕ್ಕವಯಸ್ಸಿನಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ. ಆದರೆ, ನಮ್ಮ ಅಪ್ಪನ‌ ಕೆಲವು ಗುಣಗಳನ್ನು ವಸಿಷ್ಠ ಸಿಂಹ‌ನಲ್ಲಿ ನೋಡಿದ ಬಳಿಕ ನಾನು ಸಿಂಹನ‌ ಪ್ರೀತಿಗೆ ಮನಸೋತೆ' ಎಂದು ಹರಿಪ್ರಿಯಾ ಹೇಳಿದರು.

ಇದನ್ನೂ ಓದಿ:ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ: ಸುಂದರ ಕ್ಷಣಗಳನ್ನು ನೋಡಿ..

ABOUT THE AUTHOR

...view details