ದೊಡ್ಮನೆ ಕುಡಿ ವಿಯನ್ ರಾಜ್ಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ನಟನೆಯಿಂದ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ನಟನೆ ಜೊತೆಗೆ ಕೊನೆಯವರೆಗೂ ಪಾತ್ರದಲ್ಲಿ ಜೀವಿಸಿರೋ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ವಿನಯ್ ರಾಜ್ಕುಮಾರ್ ಅವರಿಗೆ ತಮಿಳು ಇಂಡಸ್ಟ್ರಿಯಿಂದ ಬಿಗ್ ಆಫರ್ ಒಂದು ಬಂದಿತ್ತು. ಆದರೆ, ಈ ಆಫರ್ ಅನ್ನು ವಿನಯ್ ರಾಜ್ಕುಮಾರ್ ಬೇಡ ಅಂದಿದ್ದಾರೆ. ಅಷ್ಟಕ್ಕೂ ವಿನಯ್ ಅವರಿಗೆ ಆಫರ್ ಕೊಟ್ಟಿದ್ಯಾರು ? ಅದ್ಯಾವ ಕಾರಣಕ್ಕೆ ಸ್ಟಾರ್ ನಟನ ಚಿತ್ರವನ್ನು ಅಣ್ಣಾವ್ರ ಮೊಮ್ಮಗ ಬೇಡ ಎಂದರು ಅಂತ ಹೇಳ್ತೀವಿ ಕೇಳಿ.
ರಜನಿಕಾಂತ್ ಸಿನಿಮಾದಲ್ಲಿ ಅಭಿನಯಿಸುವ ಆಫರ್ ತಿರಸ್ಕರಿಸಿದ ವಿನಯ್ ಸ್ಯಾಂಡಲ್ವುಡ್ನ ದೊಡ್ಮನೆ ಕಲಾ ಸರಸ್ವತಿಯ ಸೇವೆಯಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕುಟುಂಬ. ಕಳೆದ 50 ವರ್ಷಗಳಿಂದ ಅಣ್ಣಾವ್ರ ಕುಟುಂಬ ಕನ್ನಡ ಸಿನಿರಸಿಕರನ್ನು ರಂಜಿಸುತ್ತಾ ಬಂದಿದೆ. ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರು ಸದ್ಯ ಕನ್ನಡ ಸಿನಿ ರಂಗದಲ್ಲಿ ಬೇರೂರುತ್ತಿದ್ದು, ಅಣ್ಣಾವ್ರ ಮೊಮ್ಮಕ್ಕಳ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ದೊಡ್ಮನೆ ಅಭಿಮಾನಿ ದೇವರುಗಳು.
ವಿನಯ್ ರಾಜ್ಕುಮಾರ್, ಧನ್ಯಾ ರಾಮ್, ಧೀರೆನ್ ಈಗಾಗಲೇ ಬಣ್ಣ ಹಚ್ಚಿ ಸಿನಿ ಪ್ರೇಮಿಗಳನ್ನು ರಂಜಿಸಿದರೆ, ಯುವ ರಾಜ್ಕುಮಾರ್ ಸ್ಯಾಂಡಲ್ವುಡ್ಗೆ ಬಲಗಾಲಿಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ವಿನಯ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಟನೆ ಅನ್ನೋದು ಅಣ್ಣಾವ್ರ ಕುಟುಂಬದ ರಕ್ತದಲ್ಲೇ ಇದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.
ವಿನಯ್ ರಾಜ್ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದು ಕೊಂಡಂತೆ ಗೆಲುವು ಸಿಗದಿದ್ರೂ ತಮ್ಮ ನಟನೆ ಮೂಲಕ ಚಿತ್ರರಂಗಕ್ಕೆ ಆಸ್ತಿಯಾಗುವ ಭರವಸೆಯಂತೂ ಮೂಡಿಸಿದ್ದಾರೆ. ಅಲ್ಲದೇ ಸಾಕಷ್ಟು ಯುವ ನಿರ್ದೇಶಕರು ಅಣ್ಣಾವ್ರ ಮೊಮ್ಮಗನಿಗಾಗಿ ಕಥೆ ಬರೆದು ಸಿನಿಮಾ ಮಾಡುವ ಕನಸು ಕಾಣ್ತಿದ್ದಾರೆ. ಅದೇ ರೀತಿ ಅಣ್ಣಾವ್ರ ಮೊಮ್ಮಗನ ಮೇಲೆ ನಮ್ಮ ಮಣ್ಣಿನ ನಿರ್ದೇಶಕರು ಮಾತ್ರವಲ್ಲ, ತಮಿಳು ನಿರ್ದೇಶಕರು ಸಹ ಕಥೆ ರೆಡಿ ಮಾಡಿ ಕಾಲಿವುಡ್ಗೆ ಬರುವಂತೆ ಆಫರ್ ಕೊಟ್ಟಿದ್ದಾರೆ. ವಿನಯ್ ಅವರನ್ನು ತಮಿಳು ಚಿತ್ರಕ್ಕೆ ನಾಯಕನಾಗಿ ಆಫರ್ ಮಾಡಿಲ್ಲ. ಬದಲಿಗೆ ಸೂಪರ್ ಸ್ಟಾರ್ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಆಹ್ವಾನ ನೀಡಿದ್ದು, ಬರಿಗೈಲಿ ವಾಪಸ್ ಆಗಿದ್ದಾರೆ.
ಅಣ್ಣಾವ್ರ ಮೊಮ್ಮಗ ಅದ್ಯಾವ ಸೂಪರ್ ಸ್ಟಾರ್ ಸಿನಿಮಾ ರಿಜೆಕ್ಟ್ ಮಾಡಿದ್ರಪ್ಪ ಅಂದ್ರೆ ಅದಕ್ಕೆ ಉತ್ತರ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್. ಆಶ್ಚರ್ಯ ಎನಿಸಿದರು ಈ ವಿಚಾರವನ್ನು ನಂಬಲೇಬೇಕು. ಹೌದು, ತಲೈವ ರಜಿನಿಕಾಂತ್ ಅವರ ಚಿತ್ರದಲ್ಲಿ ನಟಿಸುವಂತೆ ಬಂದ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ರಜಿನಿಕಾಂತ್ ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ರೆ ಸಾಕಪ್ಪ ಅಂತ ಸ್ಟಾರ್ ನಟರು ಕಾಯೋದುಂಟು. ಆದರೂ ವಿನಯ್ ಅವರು ರಜನಿಕಾಂತ್ ಚಿತ್ರದಲ್ಲಿ ನಟಿಸಲ್ಲ ಅಂತ ಹೇಳುವ ಮೂಲಕ ಚಿತ್ರದ ನಿರ್ದೇಶಕರಿಗೆ ನಿರಾಸೆ ಮೂಡಿಸಿದ್ದಾರೆ.
ಅಷ್ಟಕ್ಕೂ ರಾಘಣ್ಣನ ಪುತ್ರ ರಜನಿ ಅವರ ಯಾವ ಚಿತ್ರವನ್ನುರಿಜೆಕ್ಟ್ ಮಾಡಿದ್ರು, ಚಿತ್ರದ ಟೈಟಲ್ ಏನು? ಆ ಚಿತ್ರಕ್ಕೆ ನಿರ್ದೇಶಕರು ಯಾರು ಅಂತ ಗೊತ್ತಾದ್ರೆ ವಿನಯ್ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾದ್ರೂ ಏಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡೋದು ಸಹಜ. ರಜಿನಿ ಸದ್ಯ ಜೈಲರ್ ಚಿತ್ರದಲ್ಲಿ ಬ್ಯಸಿಯಾಗಿದ್ದಾರೆ. ವಿಶೇಷ ಅಂದ್ರೆ ಜೈಲರ್ ಚಿತ್ರದಲ್ಲಿ ಶಿವಣ್ಣ ಕೂಡ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಇನ್ನು ರಜಿನಿ ತಮ್ಮ ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಮ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ರಜನಿಯ 170ನೇ ಚಿತ್ರ ಲಾಲ್ ಸಲಾಮ್ ಚಿತ್ರದಲ್ಲಿ ಅಭಿನಯಿಸುವಂತೆ ವಿನಯ್ ರಾಜ್ಕುಮಾರ್ ಅವರಿಗೆ ರಜನಿ ಪುತ್ರಿ ಐಶ್ವರ್ಯ ಅವರೇ ಆಫರ್ ಕೊಟ್ಟಿದ್ರಂತೆ. ಅದ್ರೆ ವಿನಯ್ ರಜನಿ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದಾರೆ ಅನ್ನೋ ಮಾಹಿತಿ ಈಟಿವಿ ಭಾರತಕ್ಕೆ ಸಿಕ್ಕಿದೆ.
ಇದನ್ನೂ ಓದಿ:ಶಂಕರಾಭರಣಂ ಬಿಡುಗಡೆಯಾದ ದಿನದಂದೇ ನಿಧನರಾದ ದಿಗ್ಗಜ ನಿರ್ದೇಶಕ ಕೆ ವಿಶ್ವನಾಥ್
ಅಣ್ಣಾವ್ರ ಫ್ಯಾಮಿಲಿಗೂ ಹಾಗೂ ರಜನಿಕಾಂತ್ ಅವರಿಗೂ ಆತ್ಮೀಯ ಸಂಭದವಿದೆ. ಅಲ್ಲದೇ ಬಹಳ ವರ್ಷಗಳ ನಂತರ ತಲೈವಾ ಜೊತೆಗೆ ಶಿವ ರಾಜ್ಕುಮಾರ್ ಒಟ್ಟಿಗೆ ಅಭಿನಯಿಸುವ ಕಾಲ ಕೂಡಿ ಬಂದಿದೆ. ಇಷ್ಟಾದ್ರೂ ವಿನಯ್ ಅದ್ಯಾವ ಕಾರಣಕ್ಕೆ ರಜನಿಯ 170ನೇ ಚಿತ್ರದ ಆಫರ್ ಕೈಬಿಟ್ರು ಅನ್ನೋ ಪ್ರಶ್ನೆ ದೊಡ್ಮನೆ ಅಭಿಮಾನಿಗಳಲ್ಲಿದೆ. ಅದರೆ ವಿನಯ್ ರಾಕ್ಕುಮಾರ್ ಚಿತ್ರದ ಕಥೆ ತನ್ನ ಈಮೇಜ್ಗೆ ಹೊಂದದ ಕಾರಣ ಈ ಚಿತ್ರದ ಆಫರ್ ಅನ್ನು ಅಕ್ಸೆಪ್ಟ್ ಮಾಡಿಲ್ಲ ಅನ್ನೋದು ವಿನಯ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.