ದೇಶಾದ್ಯಂತ ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಣೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ವಿಘ್ನ ವಿನಾಯಕನ ಉತ್ಸವ ಈ ಬಾರಿ ಕಳೆಗಟ್ಟಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ವಿಜೃಂಭಣೆಯಿಂದ ಹಬ್ಬಾಚರಿಸಿದ್ದಾರೆ.
ಗಣಪತಿಗೆ ಆರತಿ ಬೆಳಗಿದ ಬಾಲಿವುಡ್ ನಟ ಸಲ್ಮಾನ್ ಖಾನ್
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ್ದಾರೆ.
ಗಣಪನಿಗೆ ಆರತಿ ಬೆಳಗಿದ ಸಲ್ಮಾನ್ ಖಾನ್
ನಿನ್ನೆ ಸಂಜೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿ ಸಹೋದರಿ ಅರ್ಪಿತಾ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆಯುಷ್ ಶರ್ಮಾ ಮತ್ತು ರಿತೇಶ್ ದೇಶಮುಖ್ ಜೊತೆ ಸೇರಿ ಗಜಮುಖನಿಗೆ ಆರತಿ ಬೆಳಗಿ ನಮಸ್ಕರಿಸಿದರು. ಸಲ್ಲು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು, "ಗಣಪತಿ ಬಪ್ಪಾ ಮೋರೆಯಾ" ಬರೆದಿದ್ದಾರೆ. ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:Ganesh Chaturthi 2022: ಸಿನಿಮಾ ನಟರ ಗೆಟಪ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಗಣೇಶ ಮೂರ್ತಿಗಳು