ಕರ್ನಾಟಕ

karnataka

ETV Bharat / entertainment

ಹಂಟರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಕಬೀರ್ ಬೇಡಿ - Hunter movie

ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಮೊದಲ ಬಾರಿಗೆ ಹಂಟರ್ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Actor Kabir Bedi
ಹಾಲಿವುಡ್​, ಬಾಲಿವುಡ್ ನಟ ಕಬೀರ್ ಬೇಡಿ

By

Published : Sep 28, 2022, 5:37 PM IST

Updated : Sep 28, 2022, 6:13 PM IST

ಅಂತಾರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಮೊಟ್ಟ ಮೊದಲ ಬಾರಿಗೆ ಹಂಟರ್ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಂಟರ್ ಸಿನಿಮಾ ಮುಖಾಂತರ ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿರೋ ಹಂಟರ್ ಸಿನಿಮಾದಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ - ನಾಯಕಿಯರಾಗಿದ್ದು ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಕಬೀರ್ ಬೇಡಿ

ಹಾಲಿವುಡ್​ನ ಹಲವಾರು ಸಿನಿಮಾಗಳಲ್ಲಿ ಕಬೀರ್ ಬೇಡಿ ಜೇಮ್ಸ್ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ಹೆಸರುಗಳೊಂದಿಗೆ ಅಭಿನಯಿಸಿದ್ದಾರೆ. ಇದರ ಜೊತೆಗೆ ಯುರೋಪ್​ನಾದ್ಯಂತ ಧೂಳೆಬ್ಬಿಸಿದ್ದ ನಂಬರ್ 1 ಟಿವಿ ಸೀರಿಸ್ "ಸಂದೋಕನ್" ನಲ್ಲಿ ನಟಿಸಿದ್ದ ಬೇಡಿ ಅವರಿಗೆ ಕಳೆದ ಸೆಪ್ಟೆಂಬರ್​ನಲ್ಲಿ ಇಟೆಲಿಯ ವೆನಿಸ್​ನಲ್ಲಿ "Life time achievement award'' ಬಂದಿದೆ. ಇದೀಗ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಹಾಲಿವುಡ್​, ಬಾಲಿವುಡ್ ನಟ ಕಬೀರ್ ಬೇಡಿ

ಇದಲ್ಲದೇ ಕಬೀರ್ ಬೇಡಿಯವರು ತ್ರಿವಿಕ್ರಮ ಸಾಪಲ್ಯ ಅವರ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಪಿರಿಯಾಡಿಕ್ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ತ್ರಿವಿಕ್ರಮ ಅವರು ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸಿ, ಅದೆರಡರಲ್ಲೂ ಕಬೀರ್ ಬೇಡಿಯಂತಹ ವಿಶ್ವದ ಪ್ರಖ್ಯಾತ ನಟನನ್ನು ಕರೆತಂದಿರುವುದು ಹೆಮ್ಮೆಯ ವಿಷಯ.

ಇದನ್ನೂ ಓದಿ:ದಸರಾ ಧಮಾಕ: ಮನೆಯಲ್ಲೇ ಕುಟುಂಬಸ್ಥರೊಂದಿಗೆ ನೋಡಬಹುದು ಗಾಳಿಪಟ 2 ಸಿನಿಮಾ

Last Updated : Sep 28, 2022, 6:13 PM IST

ABOUT THE AUTHOR

...view details