ಕರ್ನಾಟಕ

karnataka

ETV Bharat / entertainment

ಹೆಚ್ಚಿನ ಸೆಲ್ಫಿಗೆ ನಿರಾಕರಿಸಿದ ನಟನ ಮೇಲೆ ಬಾಟಲ್​ ಎಸೆದ ಅಭಿಮಾನಿ: ವಿಡಿಯೋ ವೈರಲ್​ - ಆಕಾಶ್ ಚೌಧರಿ ಮೇಲೆ ಹಲ್ಲೆ

ನಟ ಆಕಾಶ್ ಚೌಧರಿ ಮೇಲೆ ಅಭಿಮಾನಿಯೋರ್ವ ಬಾಟಲ್​ ಎಸೆದಿದ್ದಾನೆಂಬ ಆರೋಪ ಕೇಳಿ ಬಂದಿದೆ.

Actor Akash Choudhary
ನಟ ಆಕಾಶ್ ಚೌಧರಿ

By ETV Bharat Karnataka Team

Published : Sep 16, 2023, 5:49 PM IST

ಇತ್ತೀಚಿದೆ ನಡೆದ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಟನೊಂದಿಗೆ ಅಸಭ್ಯವಾಗಿ ವ್ಯಕ್ತಿಯೋರ್ವ ವರ್ತಿಸಿದ್ದು, ವಿಡಿಯೋ ವೈರಲ್​ ಆಗಿದೆ. ನಟ, ಮಾಜಿ ಮಿಸ್ಟರ್ ಇಂಡಿಯಾ ಆಕಾಶ್ ಚೌಧರಿ (Akash Choudhry) ಅವರು ಮುಂಬೈನಲ್ಲಿ ಕಾಣಿಸಿಕೊಂಡರು. ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಸುತ್ತುವರೆದರು. ಆದ್ರೆ ಅದೇ ಅಭಿಮಾನಿಗಳ ಗುಂಪಿನಿಂದ ಸಂಕಷ್ಟದ ಪರಿಸ್ಥಿತಿಯನ್ನೂ ಎದುರಿಸಿದರು. ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ಅಭಿಮಾನಿಗಳ ಅಸಭ್ಯ ವರ್ತನೆಯನ್ನು ಕಾಣಬಹುದು.

ನಟ ಆಕಾಶ್ ಚೌಧರಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕೆಲ ಅಭಿಮಾನಿಗಳು ಬಂದು ಸೇರಿದರು. ವಿಡಿಯೋದಲ್ಲಿ, ಒಂದೆರಡು ಫೋಟೋ ಕ್ಲಿಕ್ಕಿಸಿದಂತೆ ತೋರುತ್ತಿದೆ. ಆದರೆ, ಆಕಾಶ್ ಹೆಚ್ಚಿನ ಪೋಸ್​ ನೀಡಲು ನಿರಾಕರಿಸಿದಾಗ, ಅಸಮಾಧಾನಗೊಂಡ ಅಭಿಮಾನಿಯೋರ್ವ ನೀರಿನ ಬಾಟಲಿಯನ್ನು ನಟನ ಮೇಲೆ ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ಆಘಾತದ ಜೊತೆಗೆ ಗೊಂದಲಕ್ಕೆ ಕಾರಣವಾಯಿತು. ನಟ, ಏನಿದು? ಎಂದು ಪ್ರಶ್ನಿಸಿದ್ದಾರೆ. ಪರಿಸ್ಥಿತಿಯು ಕೊಂಚ ಹದಗೆಟ್ಟಿತು. ಸಣ್ಣ ಮಟ್ಟಿನ ನೂಕಾಟ ತಳ್ಳಾಟ ನಡೆದಿದೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಆ ವ್ಯಕ್ತಿಯ ವಿರುದ್ಧ ಅಸಮಧಾನ ವ್ಯಕ್ತವಾಗುತ್ತಿದೆ.

ಈ ಘಟನೆಯು ಸೆಲೆಬ್ರಿಟಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒತ್ತಿ ಹೇಳಿದೆ. ಅಭಿಮಾನ ತೀವ್ರ ರೂಪ ಪಡೆದಾಗ, ಇಂತಹ ದುರ್ಘಟನೆಗಳು ನಡೆಯುತ್ತವೆ. ಹೆಚ್ಚಿನ ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರನ್ನು ಗೌರವಿಸುತ್ತಾರೆ ಮತ್ತು ಅವರನ್ನು ಬೆಂಬಲಿಸುತ್ತಾರೆ. ಆದ್ರೆ ಇಂತಹ ಘಟನೆಗಳು ಮಾತ್ರ ದುರದೃಷ್ಟಕರ. ಕೆಲ ಅಭಿಮಾನಿಗಳು ತಾವು ಮೆಚ್ಚುವ ಸೆಲೆಬ್ರಿಟಿಗಳಿಗೆ ಹತ್ತಿರವಾಗಲು ಪ್ರಯತ್ನಿಸುವ ವೇಳೆ ಮಿತಿ ಮೀರಿ ವರ್ತಿಸೋದುಂಟು. ಈ ವಿಡಿಯೋ ಅದಕ್ಕೆ ಸ್ಪಷ್ಟ ಉದಾಹರಣೆ. ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ, ಸೆಲೆಬ್ರಿಟಿಗಳ ಖಾಸಗಿತನಕ್ಕೆ ಅಡ್ಡಿಯಾಗಬಾರದು ಎಂಬುದನ್ನು ಅಭಿಮಾನಿಗಳು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.

ಇದನ್ನೂ ಓದಿ:ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ - ಸಮಂತಾ?!

ಮಿಶ್ರ ಪ್ರತಿಕ್ರಿಯೆ ವ್ಯಕ್ತ: ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಕೂಡಲೇ, ನೆಟ್ಟಿಗರು ತಮ್ಮ ಅಭಿಪ್ರಯ ವ್ಯಕ್ತಪಡಿಸಲು ಶುರು ಹಚ್ಚಿಕೊಂಡಿದ್ದಾರೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನವರು ಅಭಿಮಾನಿ ಕೊಂಚ ತಾಳ್ಮೆ ವಹಿಸಬೇಕಿತ್ತು ಎಂದು ತಿಳಿಸಿದ್ದಾರೆ. ಹಲವರು ನಟ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬಹುದಿತ್ತು ಎಂದು ತಿಳಿಸಿದ್ದಾರೆ. ಆನ್​ಲೈನ್​​ನಲ್ಲಿ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ:SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

ABOUT THE AUTHOR

...view details