3 ಈಡಿಯಟ್ಸ್ ಮತ್ತು ಪಿಕೆ ಅಂತಹ ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ನಟ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೆ ಒಟ್ಟಿಗೆ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ಬಯೋಪಿಕ್ ಒಂದನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿದ್ದಾರೆ.
ವರದಿಗಳ ಪ್ರಕಾರ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಐಡಿಯಾ ಬಗ್ಗೆ ನಟ ಅಮೀರ್ ಖಾನ್ ಉತ್ಸುಕರಾಗಿದ್ದರು. ಸದ್ಯ ಅವರ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಮುಂದಿನ ಈ ಪ್ರಾಜೆಕ್ಟ್ ಇನ್ನೂ ಯೋಜನಾ ಹಂತದಲ್ಲಿದೆ. ಈ ಬಯೋಪಿಕ್ ನಿರ್ಮಾಣ ಆಗಬಹುದೆಂಬ ಭರವಸೆ ಇದೆ. ಅವರ ಹಿಂದಿನ ಸಿನಿಮಾ PK ತೆರೆ ಕಂಡು ಸುಮಾರು 9 ವರ್ಷಗಳ ನಂತರ ನಟ - ನಿರ್ದೇಶಕರ ಜೋಡಿ ಬಯೋಪಿಕ್ ಒಂದರ ಸಲುವಾಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್ ಕಳೆದ ಸಾಲಿನಲ್ಲೇ ಕೆಲಸ ಆರಂಭಿಸಿದೆ ಎಂಬ ವರದಿ ಇದೆ.
ಈ ಹಿಂದೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದ ಅಮೀರ್ ಮತ್ತು ಹಿರಾನಿ, ಕೊನೆಗೆ ಇಬ್ಬರಿಗೂ ಇಷ್ಟವಾಗುವ ವಿಷಯವನ್ನು ಅಂತಿಮಗೊಳಿಸಿದ್ದಾರೆ. ವರದಿಗಳ ಪ್ರಕಾರ, ಹಿರಾನಿ ಅವರ ಐಡಿಯಾವನ್ನು ಕೇಳಿದ ತಕ್ಷಣ ಅಮೀರ್ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ನಿರ್ದೇಶಕರು ಪ್ರಸ್ತುತ ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಂಕಿ ಸಿನಿಮಾ ಬಿಡುಗಡೆ ಆದ ಕೂಡಲೇ ನಿರ್ದೇಶಕರು ಅಮೀರ್ ಖಾನ್ ಸಿನಿಮಾದ ಫೈನಲ್ ಸ್ಕ್ರಿಪ್ಟ್ ಮತ್ತು ಇತರ ಪ್ರೀ ಪ್ರೊಡಕ್ಷನ್ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ. ಅಮೀರ್ ಮತ್ತು ಹಿರಾನಿ ಜೋಡಿಯ ಈ ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ, ಬಹುತೇಕ ಖಚಿತ ಎಂದು ಹೇಳಲಾಗಿದೆ. ಸ್ಕ್ರಿಪ್ಟ್ ಫೈನಲ್ ಆದ ಬಳಿಕ ಚಿತ್ರತಂಡ ಸಿನಿಮಾ ಘೋಷಿಸುವ ಸಾಧ್ಯತೆ ಇದೆ.