ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಪ್ರಧಾನಿ ಮೋದಿ ಇಂದು ಸಹ ಎರಡು ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಸಂಜೆ 4.30ಕ್ಕೆ ದೀದಿ ನಾಡಿನ ಪಥೇರಾಪುರಕ್ಕೆ ಆಗಮಿಸಲಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಆ ಬಳಿಕ ಸಂಜೆ 6.10ರ ಸುಮಾರಿಗೆ ಡಂಡಂ ಎರಡನೇ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಓದಿಗಾಗಿ:
ಅಮಿತ್ ಶಾ ರೋಡ್ ಶೋ ವೇಳೆ ಹಿಂಸಾಚಾರ... ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರವೇ ರದ್ದು
ಟಿಎಂಸಿ ಹಾಗೂ ಬಿಜೆಪಿ ನಡುವಿನ ಗಲಾಟೆಯಿಂದ ನಿಗದಿಗೂ ಒಂದು ದಿನ ಮುಂಚಿತವಾಗಿ ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತಿದೆ. ಮೊನ್ನೆ ಅಮಿತ್ ಶಾ ರೋಡ್ಶೋ ವೇಳೆ ಉಂಟಾದ ಗಲಭೆಯ ಪರಿಣಾಮ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಮೇ 19ರಂದು ಪಶ್ಚಿಮ ಬಂಗಾಳ ಸೇರಿದಂತೆ ಎಂಟು ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಹಂತದೊಂದಿಗೆ ಲೋಕಸಮರ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ.