ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿ ನೆಲಮಾಳಿಗೆಯಲ್ಲಿದ್ದ ಬಚ್ಚಿಟ್ಟಿದ್ದ 17 ಯುವತಿಯರನ್ನು ಪತ್ತೆ ಹಚ್ಚಿದ್ದಾರೆ. ಇವರೆಲ್ಲಾ ಬಾರ್ ಗರ್ಲ್ಸ್ ಆಗಿ ಇಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ರಹಸ್ಯ ಕೋಣೆಯಲ್ಲಿದ್ದ ಯುವತಿಯರನ್ನು ರಕ್ಷಿಸಲಾಗಿದ್ದು, ದೃಶ್ಯ ಬೆಚ್ಚಿ ಬೀಳಿಸುವಂತಿವೆ.
ಕೋವಿಡ್ ನಿಮಯ ಉಲ್ಲಂಘಿಸಿ ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ದೀಪಾ ಹೆಸರಿನ ಬಾರ್ ಮೇಲೆ ಕಳೆದ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸ್ ನಿಯಮಗಳನ್ನು ಗಾಳಿಗೆ ತೂರಿ ಬಾರ್ ಡ್ಯಾನ್ಸರ್‌ಗಳಿಂದ ಬಾರ್‌ಗಳಲ್ಲಿ ಬಹಿರಂಗವಾಗಿ ನೃತ್ಯ ಮಾಡಿಸಲಾಗುತ್ತಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿತ್ಯ ನೂರಾರು ಗ್ರಾಹಕರು ಬರುತ್ತಾರೆ ಎನ್ನಲಾಗಿತ್ತು. ರಾತ್ರಿಯಿಡೀ ಡ್ಯಾನ್ಸ್ ಬಾರ್ ನಡೆಸುತ್ತಿದ್ದರೂ ಈವರೆಗೆ ಸ್ಥಳೀಯ ಪೊಲೀಸರಿಗೆ ಈ ಮಾಹಿತಿ ಇರಲಿಲ್ಲ.
ಎನ್‌ಜಿಒವೊಂದು ನೀಡಿದ ಮಾಹಿತಿ ಮೇರೆಗೆ ಶನಿವಾರ ರಾತ್ರಿ 11.30ರ ಸುಮಾರಿಗೆ ಪೊಲೀಸರು ದಾಳಿ ಮಾಡಿದಾಗ ಕುಣಿದು ಕುಪ್ಪಳಿಸುತ್ತಿದ್ದ ಬಾರ್ ಗರ್ಲ್ಸ್ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಕಣ್ಮರೆಯಾಗಿದ್ದರು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದ ಡ್ಯಾನ್ಸ್ ಬಾರ್‌ನಲ್ಲಿ ತೀವ್ರ ಶೋಧಕಾರ್ಯ ನಡೆಸಿ ನೆಲಮಾಳಿಗೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಯುವತಿಯರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವತಿಯರನ್ನು ಪತ್ತೆ ಹಚ್ಚಿದ್ದು ಹೇಗೆ?
ಪೊಲೀಸರು ಡ್ಯಾನ್ಸ್‌ಬಾರ್‌ನ ಶೌಚಾಲಯ, ಸ್ಟೋರೇಜ್ ರೂಮ್, ಅಡುಗೆ ಮನೆಯ ಪ್ರತಿಯೊಂದು ಮೂಲೆಯ ಒಂದಿಂಚೂ ಬಿಡದೆ ಶೋಧ ಕಾರ್ಯ ನಡೆಸಿದರೂ ಪ್ರಯೋಜವಾಗಿರಲಿಲ್ಲ. ಬಾರ್ ಮ್ಯಾನೇಜರ್, ಕ್ಯಾಷಿಯರ್, ವೇಟರ್‌ಗಳನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಯಿತು. ಆದರೆ, ಬಾರ್‌ನಲ್ಲಿ ಡ್ಯಾನ್ಸರ್‌ಗಳು ಇಲ್ಲ ಅಂತಲೇ ವಾದಿಸುತ್ತಿದ್ದರು.