ಇಂದೋರ್ (ಮಧ್ಯಪ್ರದೇಶ):'ಮಿನಿ ಮುಂಬೈ' ಎಂದು ಕರೆಯಲ್ಪಡುವ ಮಧ್ಯಪ್ರದೇಶದ ಇಂದೋರ್ ಈಗ ಕೋವಿಡ್ ಅನ್ಲಾಕ್ನತ್ತ ಗಮನ ಹರಿಸುತ್ತಿರುವ ವೇಳೆ ಇಲ್ಲಿ ಅಪರಾಧ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಇದೀಗ ವೇಶ್ಯಾವಾಟಿಕೆ ದಂಧೆಯನ್ನು ಇಂದೋರ್ ಪೊಲೀಸರು ಬಯಲಿಗೆಳೆದಿದ್ದಾರೆ.
ಇಂದೋರ್‌ನ ಲಾಸುಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೋಟೆಲ್ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಯುವತಿಯರು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರು ಯುವತಿಯರು ಹೈದರಾಬಾದ್ ನಿವಾಸಿಗಳಾಗಿದ್ದು, ಇಂದೋರ್ಗೆ ಬಂದು ದಂಧೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.