ಕರ್ನಾಟಕ

karnataka

ETV Bharat / crime

ಉತ್ತರಪ್ರದೇಶ: 5 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ ಆರೋಪ

ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. 5 ವರ್ಷದ ಪುಟ್ಟ ಕಂದಮ್ಮನ ಮೇಲೆ 13 ವರ್ಷದ ಬಾಲಕ ಅತ್ಯಾಚಾರ ಮಾಡಿರುವ ಆರೋಪ ಪ್ರಕರಣ ಗಾಜಿಯಾಬಾದ್‌ನಲ್ಲಿ ನಡೆದಿದೆ.

minor girl raped by 13 year old child in ghaziabad
ಉತ್ತರಪ್ರದೇಶ: 5 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ ಆರೋಪ

By

Published : Oct 28, 2021, 8:04 PM IST

ಉತ್ತರ ಪ್ರದೇಶ: ಗಾಜಿಯಾಬಾದ್‌ನಲ್ಲಿ ಐದು ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಬಾಲಕಿ ಟ್ಯೂಷನ್‌ಗಾಗಿ ತನ್ನ ಮನೆಗೆ ಬಂದಾಗ ಬಾಲಕ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕನನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಅಸಲಿಗೆ ಆಗಿದ್ದು ಇಷ್ಟು..

ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಿಜಯನಗರ ಪ್ರದೇಶದಲ್ಲಿನ 5 ವರ್ಷದ ಬಾಲಕಿ ತನ್ನ ಸಹೋದರನೊಂದಿಗೆ ಶಿಕ್ಷಕನ ಮನೆಗೆ ಟ್ಯೂಷನ್‌ಗೆ ಹೋಗಿದ್ದಳು. ಆದರೆ, ಆ ಶಿಕ್ಷಕ ಮನೆಯಲ್ಲಿ ಇರಲಿಲ್ಲ. ಆಗ ಬಾಲಕಿ ಅಲ್ಲಿಯೇ ಉಳಿದುಕೊಂಡರೆ, ಆಕೆಯ ಸಹೋದರ ಮನೆಗೆ ವಾಪಸ್‌ ಆಗಿದ್ದಾನೆ. ಈ ವೇಳೆ, ಟ್ಯೂಷನ್ ಶಿಕ್ಷಕನ 13 ವರ್ಷದ ಬಾಲಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಕೃತ್ಯದ ಬಳಿಕ ಪುಟ್ಟ ಕಂದಮ್ಮ ಅಳುತ್ತಾ ಮನೆಗೆ ಬಂದು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಗುವಿನ ತಂದೆ ಕುಟುಂಬ ನಿರ್ವಹಣೆಗಾಗಿ ರಿಕ್ಷಾ ಓಡಿಸುತ್ತಿದ್ದಾರೆ. ಆ ಶಿಕ್ಷಕರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಕೊಡುವುದಾಗಿ ಹೇಳಿ ಕೃತ್ಯದ ಬಗ್ಗೆ ಚರ್ಚಿಸಿ ರಾಜಿ ಮಾಡಿಕೊಳ್ಳುವಂತೆ ಬಾಲಕನ ತಂದೆ ಒತ್ತಡ ಹೇರಿದ್ದರು ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details