ಮಾಲ್ಡಾ (ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ನಿಹಾರ್ ರಂಜನ್ ಘೋಷ್ ಅವರ ಮನೆ ಹಾಗೂ ಪಕ್ಷದ ಕಚೇರಿಯನ್ನು ದುಷ್ಕರ್ಮಿಗಳ ದೊಡ್ಡ ಗುಂಪೊಂದು ಧ್ವಂಸ ಮಾಡಿದೆ.
ರಾತ್ರೋ ರಾತ್ರಿ ಟಿಎಂಸಿ ಶಾಸಕನ ಮನೆ-ಕಚೇರಿ ಧ್ವಂಸಗೊಳಿಸಿದ ದುಷ್ಕರ್ಮಿಗಳು ನಿನ್ನೆ ರಾತ್ರಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ರಂಜನ್ ಘೋಷ್ರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಮನೆ, ಕಚೇರಿಯ ಒಳಗೆ-ಹೊರಗೆ ಇದ್ದ ಸಾಮಗ್ರಿಗಳು, ವಾಹನಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಕೈ, ಕಾಲುಗಳನ್ನು ಕಟ್ಟಿ ತಂದೆ ಎದುರೇ ಜೀವಂತ ಸುಟ್ಟು ಹಾಕಿದ ಸುಪಾರಿ ಕಿಲ್ಲರ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಿಹಾರ್ ರಂಜನ್ ಘೋಷ್, ಸುಮಾರು 150 ಅಪರಿಚಿತರು ಇದ್ದಕ್ಕಿದ್ದಂತೆ ಬಂದು ಎಲ್ಲವನ್ನೂ ಧ್ವಂಸ ಮಾಡಲು ಪ್ರಾರಂಭಿಸಿದಾಗ ನಾನು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿದ್ದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪೈಪೋಟಿಯಲ್ಲಿರುವ ಬಿಜೆಪಿ ಹಾಗೂ ಟಿಎಂಸಿ ನಡುವೆ ಗಲಾಟೆಗಳು ನಡೆಯುತ್ತಿವೆ.