ಕರ್ನಾಟಕ

karnataka

ETV Bharat / crime

ಅಪ್ರಾಪ್ತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿ ನೇಣಿಗೆ ಶರಣು - ಉತ್ತರ ಪ್ರದೇಶದ ಸೀತಾಪುರ

ಲೈಂಗಿಕ ಕಿರುಕುಳ ನೀಡಿರುವ ಕುರಿತು ಬಾಲಕಿ ಕುಟುಂಬಸ್ಥರು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಕೇಳಿಬಂದಿದ್ದು, ಇದೀಗ ಆಕೆ ನೇಣಿಗೆ ಶರಣಾಗಿದ್ದಾಳೆ.

ಅಪ್ರಾಪ್ತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿ ನೇಣಿಗೆ ಶರಣು
Girl commits suicide after being molested in UP

By

Published : Mar 21, 2021, 2:14 PM IST

ಸೀತಾಪುರ (ಉತ್ತರ ಪ್ರದೇಶ):17 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ 15 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

ಮಗಳು ಸಾಯುವ ಮುನ್ನವೇ, ಲೈಂಗಿಕ ಕಿರುಕುಳ ಸಂಬಂಧ ಬಾಲಕಿ ಕುಟುಂಬಸ್ಥರು ದೂರು ನೀಡಿದ್ದರೂ ಕೂಡಲೇ ಕ್ರಮ ಕೈಗೊಳ್ಳದ ಕಾರಣ ಇಮ್ಲಿಯಾ ಸುಲ್ತಾನಪುರ ಮತ್ತು ಕಾಜಿ ಕಮಲ್‌ಪುರ ಪೊಲೀಸ್ ಠಾಣೆಗಳ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಉತ್ತರ ವಲಯ) ರಾಜೀವ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮನ್ಸುಖ್​ ಹಿರೇನ್ ನಿಗೂಢ ಸಾವು ಪ್ರಕರಣ: ಇಬ್ಬರ ಬಂಧನ

ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್ ಪಿ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details