ಕರ್ನಾಟಕ

karnataka

ETV Bharat / crime

ಬಡತನ, ಸಾಲಕ್ಕೆ ಹೆದರಿ ಪಾರ್ಶ್ವವಾಯು ಪುತ್ರನೊಂದಿಗೆ ದಂಪತಿ ಆತ್ಮಹತ್ಯೆ..

ಬಡತನ ಹಾಗೂ ಸಾಲ ತೀರಿಸಲು ಹೆದರಿ ದಂಪತಿ ತಮ್ಮ ಪಾರ್ಶ್ವವಾಯು ಪುತ್ರನೊಂದಿಗೆ ಆತ್ಮಹತ್ಯೆಗೆ ಶರಣು - ಶಿವಮೊಗ್ಗದ ಅಣ್ಣನಗರದಲ್ಲಿ ಮನಕಲಕುವ ಘಟನೆ.

Couple paralyzed son committed suicide
ಬಡತನ, ಸಾಲಕ್ಕೆ ಹೆದರಿ ಪಾಶ್ವವಾಯು ಪುತ್ರನೊಂದಿಗೆ ದಂಪತಿ ಆತ್ಮಹತ್ಯೆ

By

Published : Jan 13, 2023, 5:02 PM IST

ಸ್ಥಳೀಯ ನಿವಾಸಿ ಜಯಮ್ಮ

ಶಿವಮೊಗ್ಗ:ಬಡತನ ಹಾಗೂ ಸಾಲ ತಿರಿಸಲು ಹೆದರಿ ದಂಪತಿ ತಮ್ಮ ಪಾರ್ಶ್ವವಾಯು ಪುತ್ರನೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಅಣ್ಣನಗರದ ಮೊದಲನೇ ತಿರುವಿನಲ್ಲಿ ಘಟನೆ ನಡೆದಿದೆ. ಅಣ್ಣನಗರದ ಬಾಡಿಗೆ ಮನೆಯಲ್ಲಿ ಪರದಾಮಯ್ಯ(65), ದಾನಮ್ಮ(58) ಹಾಗೂ ಮಂಜುನಾಥ್(25) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪರದಾಮಯ್ಯ ವಯಸ್ಸಾಗಿದ್ದು ಸೆಕ್ಯೂರಿಟಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲ ದಿನಗಳಿಂದ ಮನೆಯಲ್ಲಿಯೇ ಇದ್ದರು. ದಾನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ಮಗ ಮಂಜುನಾಥ್ ಪಾಶ್ವವಾಯು ಪೀಡಿತನಾಗಿದ್ದು, ಮನೆಯಲ್ಲಿಯೇ ಇರುತ್ತಿದ್ದ. ಕುಟುಂಬದಲ್ಲಿ ದಾನಮ್ಮ ಮಾತ್ರ ದುಡಿಯುತ್ತಿದ್ದು, ಮನೆ ನಿರ್ವಹಣೆ ಮಾಡುತ್ತಿದ್ದರು.

ಘಟನೆ ಹಿನ್ನಲೆ: ಬೆಳಗ್ಗೆ 12 ಗಂಟೆಯಾದರು ಸಹ ಮನೆ ಬಾಗಿಲು ತೆರೆಯದೇ ಹೋದಾಗ ಪಕ್ಕದ ಮನೆಯ ಜಯಮ್ಮ ಎಂಬುವರು ದಾನಮ್ಮನವರ ಮನೆ ಬಾಗಿಲು ನೂಕಿದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಮನೆ ಮಾಲೀಕ ಬಂದು ಮನೆ ಬಾಡಿಗೆ ನೀಡುವಂತೆ ಜೋರು ಮಾಡಿ ಹೋಗಿದ್ದರು. ಇದರಿಂದಲೇ ಬೇಸತ್ತು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ನಂತರ ಅಕ್ಕ ಪಕ್ಕದ ನಿವಾಸಿಗಳು ಅವರ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇನ್ನು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಂಜುನಾಥ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ಪಕ್ಕದ ಮನೆಯ ನಿವಾಸಿ ಜಯಮ್ಮ ಮಾತನಾಡಿ, ’’ನಾನು ಆತ್ಮಹತ್ಯೆ ಮಾಡಿಕೊಂಡ ನಂತರ ಬೆಳಗ್ಗೆ 12 ಗಂಟೆ ಯಾದರೂ ಮನೆ ಬಾಗಿಲು ತೆರೆಯದೇ ಹೋದಾಗ, ನಾನು ಬಾಗಿಲು ನೂಕಿದಾಗ ಬಾಗಿಲ ಹಿಂದೆ ಮೂರು ಚೇರ್ ಗಳಿದ್ದವು. ಗಂಡ ನೆಲದ ಮೇಲೆ ಬಿದ್ದಿದ್ದು. ಪತ್ನಿ ಗೋಡೆಗೆ ಒರಗಿಕೊಂಡು ಕುಳಿತುಕೊಂಡಿದ್ದರು. ಮಗ ಅಡುಗೆ ಮನೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ನಾವು ವಾಸವಾಗಿರುವ ಪಕ್ಕದ ಬೀದಿಯಲ್ಲಿ ಅವರ ಸಂಬಂಧಿಕರು ಇದ್ದರು, ಅವರಿಗೆ ವಿಷಯ ತಿಳಿಸಲಾಯಿತ್ತು’’ ಎಂದರು.

’’ಮೃತರು ಕಡುಬಡವರಾಗಿದ್ದಾರೆ, ಸ್ವಂತ ಮನೆ ಸರ್ಕಾರ ಮನೆ, ಪಡಿತರ ಚೀಟಿ ಇರಲಿಲ್ಲ, ಇವರು ನಿರ್ಗತಿಕರಾಗಿದ್ದಾರೆ. ಇವರಿಗೆ ಯಾವುದೇ ಸರ್ಕಾರದ ಸೌಲಭ್ಯ ಸಿಕ್ಕಿರಲಿಲ್ಲ. ಆಧಾರ್ ಕಾರ್ಡ್ ಸಹ ಅವರ ಬಳಿ ಇರಲಿಲ್ಲ. ದಾನಮ್ಮ ಅವರು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಅವರ ಸಂಬಳ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ, ಇವರು ತಮ್ಮ ಕೈಯಲ್ಲಿ ಅಗುವ ತನಕ ದುಡಿದು ತಿಂದಿದ್ದಾರೆ. ಆದರೆ, ಸರ್ಕಾರ ಇವರಿಗೆ ಸೌಲಭ್ಯ ನೀಡದ ಕಾರಣ ಮೂವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಸ್ಥಳೀಯ ನಿವಾಸಿ ಮುತ್ತಣ್ಣ ಹೇಳಿದರು.

ಪೊಲೀಸರು ಮನೆಯ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ:ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ: ಕುರಿಗಾಹಿ ನೆರವಿಂದ ಮಗು ರಕ್ಷಣೆ, ಇಬ್ಬರು ನಾಪತ್ತೆ

ABOUT THE AUTHOR

...view details