ಕಲಬುರಗಿ: ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಾಹಿತಿಗಳು ಲಭ್ಯವಾಗಿದ್ದು, ಗಂಡನ ಅನುಮಾನ ಭೂತವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.
ನಿನ್ನೆ ಚಿಂಚೋಳಿ ತಾಲೂಕಿನ ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮದ ಹೊರವಲಯದ ಗಣಿ ಪ್ರದೇಶದಲ್ಲಿ ತೆಲಂಗಾಣ ರಾಜ್ಯದ ವಿಕಾರಬಾದ್ ಜಿಲ್ಲೆಯ ಬಾವಿಮಡಿ ತಾಂಡದ ನಿವಾಸಿ ಭದ್ರು ರಾಠೋಡ್ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಗೆ ಸಂಬಂಧಿಸಿ ಭದ್ರು ಮಗ ಮಿಥುನ್ ತನ್ನ ತಾಯಿ ಸುಶೀಲಾಬಾಯಿ ವಿರುದ್ಧವೇ ದೂರು ನೀಡಿದ್ದ. ಪ್ರಕಣಕ್ಕೆ ಸಂಬಂಧಿಸಿ ಸುಶೀಲಾ ಬಾಯಿಯನ್ನು ವಶಕ್ಕೆ ಪಡೆದಿರುವ ಮಿರಿಯಾಣ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಭದ್ರು ರಾಠೋಡ್ ಕೊಲೆ ಪ್ರಕರಣ ಹತ್ಯೆಗೆ ಕಾರಣವಾಯ್ತಾ ಹೆಂಡತಿಯ ಮೇಲಿನ ಸಂಶಯ?
ಭದ್ರು ರಾಠೋಡ್ ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರತಿನಿತ್ಯ ಕುಡಿದು ಬಂದು ಹೆಂಡತಿಯನ್ನು ಹೊಡೆದು ಬಡೆದು ಗಲಾಟೆ ಮಾಡ್ತಿದ್ದನಂತೆ. ಅಷ್ಟೆ ಅಲ್ಲದೆ ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಮನೆಯಲ್ಲಿದ್ರು ಕೂಡ ಹೆಂಡತಿಯ ಶೀಲದ ಮೇಲೆ ಶಂಕೆ ಮಾಡಿ ಜಗಳ ತೆಗೆದು ಹಲ್ಲೆ ಮಾಡ್ತಿದ್ದನಂತೆ. ಮೊನ್ನೆ ಮೊಮ್ಮಗನ ತೊಟ್ಟಿಲು ಕಾರ್ಯಕ್ರಮಕ್ಕೆ ಪೋತಕಪಳ್ಳಿ ಗ್ರಾಮಕ್ಕೆ ಬಂದಾಗಲು ಕೂಡ ಹೆಂಡತಿಯ ಜೊತೆ ಗಲಾಟೆ ತೆಗೆದು ಜಗಳ ಮಾಡಿದ್ದನಂತೆ. ಇದ್ರಿಂದ ಬೇಸತ್ತ ಸುಶೀಲಾಬಾಯಿ ಮತ್ತು ಆತನ ಅಳಿಯ ಪ್ಲಾನ್ ಮಾಡಿ ಭದ್ರನನ್ನ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮಿರಿಯಾಣ ಪೊಲೀಸರು ಭದ್ರು ರಾಠೋಡ್ ಕೊಲೆಯ ಹಿಂದೆ ಪತ್ನಿ ಒಬ್ಬಳದ್ದೇ ಕೈವಾಡ ಇದೆಯಾ ಅಥವಾ ಮತ್ತಿನ್ಯಾರು ಭಾಗಿಯಾಗಿದ್ದಾರೆ ಎನ್ನುವ ಕುರಿತು ತನಿಖೆ ಕೈಗೊಂಡಿದ್ದಾರೆ. ತನಿಖಾ ವರದಿ ಬಂದ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.