ಸುರಪುರ: ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 68 ಬಾಕ್ಸ್ ಮದ್ಯ ವಶ ಪಡಿಸಿಕೊಂಡಿದ್ದು, 13 ಜನರನ್ನು ಬಂಧಿಸಿದ್ದಾರೆ.
ಸುರಪುರ; ಅಕ್ರಮ ಸಾಗಾಟದ 68 ಬಾಕ್ಸ್ ಮದ್ಯ ವಶ, 13 ಜನರ ಬಂಧನ - yadagiri latest news
ಹುಣಸಗಿ ಸಿಪಿಐ ದೌಲತ್ ಎನ್.ಕೆ. ಹಾಗೂ ನಾರಾಯಣಪುರ ಪಿಎಸ್ಐ ಸಿದ್ದೇಶ್ವರ ಗೆರಡೆ ನೇತೃತ್ವದಲ್ಲಿ ದಾಳಿ ಮಾಡಿ, ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.
Arrest of 13 people over illegal alcohol carried
ಹುಣಸಗಿ ಸಿಪಿಐ ದೌಲತ್ ಎನ್.ಕೆ. ಹಾಗೂ ನಾರಾಯಣಪುರ ಪಿಎಸ್ಐ ಸಿದ್ದೇಶ್ವರ ಗೆರಡೆ ನೇತೃತ್ವದಲ್ಲಿ ದಾಳಿ ಮಾಡಿ, 589 ಲೀಟರ್ ಮದ್ಯವುಳ್ಳ 68 ಬಾಕ್ಸ್ ಹಾಗೂ ಇವುಗಳ ಸಾಗಾಟಕ್ಕೆ ಬಳಸಲಾದ ನಾಲ್ಕು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ವಿವಿಧ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಗೆ ಕಾರು ಹಾಗೂ ಬೈಕುಗಳಲ್ಲಿ ಮದ್ಯ ಸಾಗಾಟವಾಗುತ್ತಿದ್ದ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಾರಾಯಣಪುರದಲ್ಲಿ ಕಾರ್ಯಾಚರಣೆ ನಡೆಸಿದ್ದು, ತಡರಾತ್ರಿ ಈ ದಾಳಿ ನಡೆಸಿದ್ದಾರೆ.