ಕರ್ನಾಟಕ

karnataka

ETV Bharat / crime

ಕುದುರೆ ರೇಸ್ ಅಡ್ಡೆ ಮೇಲೆ ಸಿಸಿಬಿ ದಾಳಿ: ನಾಲ್ವರ ಬಂಧನ - Bengaluru Crime news

ಲೈಸನ್ಸ್​ ಇಲ್ಲದೇ ಕುದುರೆ ರೇಸ್ ಬೆಟ್ಟಿಂಗ್​ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಬುಕ್ಕಿಗಳನ್ನು ಬಂಧಿಸಿದ್ದಾರೆ.

Bengaluru
ಸಿಸಿಬಿ ದಾಳಿ

By

Published : Mar 4, 2021, 9:54 AM IST

ಬೆಂಗಳೂರು:ಅಕ್ರಮ ಕುದುರೆ ರೇಸ್ ಬೆಟ್ಟಿಂಗ್​ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ವರುಣ್, ನಂದೀಶ್, ಜೀವನ್ ಬಂಧಿತ ಆರೋಪಿಗಳಾಗಿದ್ದು, ನಾಲ್ವರ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲೈಸನ್ಸ್ ಇಲ್ಲದೇ ಚಂದ್ರಾ ಲೇಔಟ್​ನ ಮನೆಯೊಂದರಲ್ಲಿ ಜೂಜಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಖೆಡ್ಡಾಗೆ ಕೆಡವಿದ್ದಾರೆ.

ಇನ್ನು ವಾಟ್ಸ್​ಆ್ಯಪ್ ಗ್ರೂಪ್​ಗಳ ಮೂಲಕ ಜನರನ್ನು ಒಟ್ಟುಗೂಡಿಸಿ, ಆನ್​ಲೈನ್​ ಪೇಮೆಂಟ್​ ಮೂಲಕ ಹಣವನ್ನು ಪಡೆಯುತ್ತಿದ್ದರು. ಇದೀಗ ಆರೋಪಿಗಳಿಂದ ಸುಮಾರು 2 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details