ತುಮಕೂರು: ರೈತಾಪಿ ವರ್ಗದ ಯುವಕರಿಗೆ ಮದುವೆ ಮಾಡಿಕೊಳ್ಳಲು ವಧು ಸಿಗುತ್ತಿಲ್ಲ. ಹಾಗಾಗಿ, ವಿವಾಹ ಭಾಗ್ಯ ಕಲ್ಪಿಸಲು ಪ್ರತ್ಯೇಕ ವಧು-ವರರ ವೇದಿಕೆ ತೆರೆಯುವಂತೆ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ಗೆ ಯುವ ರೈತರು ಮನವಿ ಸಲ್ಲಿಸಿರುವ ಪ್ರಸಂಗ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಕಗೊಂಡನಹಳ್ಳಿಯಲ್ಲಿ ನಡೆಯಿತು.
ಮದುವೆಯಾಗಲು ವಧು ಹುಡುಕಿಕೊಡಿ ಎಂದು ಮನವಿ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಕಗೊಂಡನಹಳ್ಳಿ ಮತ್ತು ತಿಪಟೂರು ತಾಲೂಕಿನ ತಿಮ್ಮಾಪುರ ಗ್ರಾಮದ ಸುಮಾರು 15 ಮಂದಿ ಯುವಕರು ಅರ್ಜಿ ಹಿಡಿದು ಬಂದು, 'ನಾವುಗಳು ಅವಿವಾಹಿತರು. ರೈತ ಯುವಕರಿಗೆ ವಿವಾಹ ಮಾಡಿಸಿ' ಎಂದು ಮನವಿ ಮಾಡಿಕೊಂಡರು.
'ಎರಡು ಗ್ರಾಮಗಳ ಯುವಕರಿಗೆ ವಿವಾಹವಾಗಲು ವಧುಗಳು ಸಿಗುತ್ತಿಲ್ಲ. ನಾವುಗಳು ರೈತರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಧುಗಳು ರೈತಾಪಿ ಯುವಕರನ್ನು ಮದುವೆಯಾಗಲು ಇಚ್ಚಿಸುತ್ತಿಲ್ಲ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕೆಂದು ವಿನಂತಿಸುತ್ತೇವೆ' ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಡ್ರಾಪ್ ಕೇಳ್ತಾರೆ, ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕಳ್ಳತನ ಮಾಡ್ತಾರೆ: ಮೂವರು ಅಂತಾರಾಜ್ಯ ಕಳ್ಳರ ಬಂಧನ
ಈ ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹಾಗೂ ಮನವಿ ಪತ್ರವನ್ನು ತಲುಪಿಸುವುದಾಗಿ ತಿಳಿಸಿದರು.