ತುಮಕೂರು :ಸಿಎಂ ಬದಲಾವಣೆ ವಿಚಾರವಾಗಿವೈರಲ್ ಆಗಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದೇ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಟೀಲ್ ಮಾತನಾಡಿರೋದು ಸತ್ಯನೇ ಇರುತ್ತದೆ. ಅಸತ್ಯ ಮಾತಾಡೋ ಪ್ರಮೇಯ ಅವರಿಗಿಲ್ಲ. ಈಗ ತಾರ್ಕಿಕ ಅಂತ್ಯ ಕಾಣಿಸೋ ಕೆಲಸ ಮಾಡಿದ್ದಾರೆ. ಯಡಿಯೂರಪ್ಪಗೆ ವಯೋಸಹಜವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ, ಕೆಳಗಿಳಿಸಲು ಮುಂದಾಗಿದ್ದಾರೆ. ಕಟೀಲ್ ಹೇಳಿಕೆಗೂ ಹೈಕಮಾಂಡ್ ಚಿಂತನೆಗೂ ಸಾಮ್ಯತೆ ಇದೆ ಎಂದರು.