ಕರ್ನಾಟಕ

karnataka

ETV Bharat / city

ತುಮಕೂರು : ರಥದ ಸುತ್ತಲೂ ಕೆಸರಿನಲ್ಲಿಯೇ ಉರುಳುಸೇವೆ ಮಾಡಿದ ಭಕ್ತರು - ರಥದ ಸುತ್ತಲೂ ಕೆಸರಿನಲ್ಲಿಯೇ ಉರುಳುಸೇವೆ ಮಾಡಿದ ಭಕ್ತರು

ತುಮಕೂರು ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಇಂದು ಹನುಮ ಜಯಂತಿ ಹಿನ್ನೆಲೆ ನಡೆದ ರಥೋತ್ಸವದ ವೇಳೆ ಭಕ್ತರು ರಥದ ಸುತ್ತಲೂ ಕೆಸರಿನ ನಡುವೆಯೂ ಉರುಳುಸೇವ ನೆರವೇರಿಸಿದರು..

tumkuru devotees participate in Shettihalli Hanuman Temple chariot festival
ರಥದ ಸುತ್ತಲೂ ಕೆಸರಿನಲ್ಲಿಯೇ ಉರುಳುಸೇವೆ ಮಾಡಿದ ಭಕ್ತರು

By

Published : Apr 16, 2022, 8:00 PM IST

ತುಮಕೂರು : ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಇಂದು ಹನುಮ ಜಯಂತಿ ಹಿನ್ನೆಲೆ ನಡೆದ ರಥೋತ್ಸವದ ವೇಳೆ ಭಕ್ತರು ರಥದ ಸುತ್ತಲೂ ಕೆಸರಿನ ನಡುವೆಯೂ ಉರುಳುಸೇವೆ ನೆರವೇರಿಸಿದರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.

ಈ ನಡುವೆ ರಥೋತ್ಸವ ಪೂರ್ಣಗೊಂಡ ನಂತರ ರಥೋತ್ಸವದ ಸುತ್ತಲೂ ಭಕ್ತರು ಉರುಳು ಸೇವೆ ಮಾಡುವುದು ಇಲ್ಲಿ ಪ್ರತೀತಿ. ಇಂದು ತುಂತುರು ಮಳೆ ಸುರಿದ ಪರಿಣಾಮ ನೆಲದಲ್ಲಿ ನೀರು ಇದ್ದರೂ ಭಕ್ತರು ಲೆಕ್ಕಿಸದೆ ಕೆಸರಿನಲ್ಲಿಯೇ ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು ಉರುಳು ಸೇವೆ ಮಾಡಿದರು.

ತುಮಕೂರು : ರಥದ ಸುತ್ತಲೂ ಕೆಸರಿನಲ್ಲಿಯೇ ಉರುಳುಸೇವೆ ಮಾಡಿದ ಭಕ್ತರು

ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ರಥೋತ್ಸವದಲ್ಲಿ 2000ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಇದೇ ವೇಳೆ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

ಇದನ್ನೂ ಓದಿ:ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ : ಕರುಳಬಳ್ಳಿಗಾಗಿ ಹುಡುಕಾಡಿದ ತಾಯಿ

ABOUT THE AUTHOR

...view details