ಕರ್ನಾಟಕ

karnataka

ETV Bharat / city

ತುಮಕೂರಿನ ಉದ್ಯಾನವನದ ಬಳಿ ಹೆಚ್ಚುತ್ತಿದೆ ಕಳ್ಳಕಾಕರ ಹಾವಳಿ

ನಗರದ ಸಾಲುಮರದ ತಿಮ್ಮಕ್ಕ ಅಕ್ಕ ತಂಗಿ ಕೆರೆ ಉದ್ಯಾನವನದ ಬಳಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳ ಗುಂಪು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದೆ ಎನ್ನಲಾಗಿದೆ.

By

Published : Feb 7, 2019, 10:51 AM IST

ಉದ್ಯಾನವನ

ತುಮಕೂರು: ನಗರದಲ್ಲಿರೋ ಕೆಲ ಉದ್ಯಾನವನಗಳ ಸಮೀಪ ರಾತ್ರಿ ವೇಳೆ ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ನಗರದ ಬೈಪಾಸ್ ಬಳಿ ಇರುವ ಸಾಲುಮರದ ತಿಮ್ಮಕ್ಕ ಅಕ್ಕ ತಂಗಿ ಕೆರೆ ಉದ್ಯಾನವನದ ಬಳಿ ಸಾರ್ವಜನಿಕರು ಓಡಾಡುವುದೇ ಕಷ್ಟಕರವಾಗಿದೆ.

ಹೌದು.., ರಾತ್ರಿ ಆಯ್ತು ಅಂದ್ರೆ ಉದ್ಯಾನವನದ ಬಳಿ ಕಳ್ಳಕಾಕರ ಹಾವಳಿ ಹೆಚ್ಚಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಹೋಗಲು ಕೂಡ ಜನರು ಹಿಂದೇಟು ಹಾಕುತ್ತಾರೆ. ದುಷ್ಕರ್ಮಿಗಳ ಗುಂಪು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದೆ ಎನ್ನಲಾಗಿದೆ.

ಉದ್ಯಾನವನ

ತುಮಕೂರು ನಗರದಿಂದ ದೇವರಾಯ ಪಟ್ಟಣ ಬಡಾವಣೆಗೆ ಈ ಉದ್ಯಾನವನ ಮೂಲಕವೇ ಹಾದು ಹೋಗಬೇಕಿದೆ. ಅಲ್ಲದೇ ಹೈವೇ ಅಂಡರ್ ಪಾಸ್ ಮೂಲಕ ಕೂಡ ಸಾಗಬೇಕಿದೆ. ರಸ್ತೆಗಳಲ್ಲಿ ಕನಿಷ್ಠ ವಿದ್ಯುತ್ ದೀಪಗಳನ್ನು ಕೂಡ ಮಹಾನಗರ ಪಾಲಿಕೆ ಅಳವಡಿಸಿಲ್ಲ. ಅಲ್ಲದೆ ರಾತ್ರಿ ವೇಳೆ ಪೊಲೀಸ್ ಬೀಟ್ ಸಹ ಇಲ್ಲದಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸಂಬಂಧ ಪಟ್ಟವರು ಇತ್ತ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details