ತುಮಕೂರು: ರಂಜಾನ್ ಹಿನ್ನೆಲೆ ಶುಕ್ರವಾರದಂದು ಸಿದ್ಧಗಂಗಾ ಮಠದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಉಪವಾಸ ಬಿಟ್ಟು ಮಠದಲ್ಲಿಯೇ ಆಹಾರವನ್ನು ಸೇವಿಸಿದರು. ಮಾಜಿ ಶಾಸಕ ರಫೀಕ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಮೆಹ್ರೋಜ್ ಖಾನ್ ಸೇರಿದಂತೆ ಹಿಂದೂ-ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ಭಾಗವಹಿಸಿದ್ದರು.
ಸಂಜೆ ಶ್ರೀಮಠದ ಆವರಣದಲ್ಲಿ ಕುಳಿತ ಮುಸ್ಲಿಂ ಮುಖಂಡರು ಹಣ್ಣಿನ ರಸವನ್ನು ಸೇವಿಸುವ ಮೂಲಕ ತಮ್ಮ ದೈನಂದಿನ ಉಪವಾಸವನ್ನು ಸ್ಥಗಿತಗೊಳಿಸಿದರು. ಈ ವೇಳೆ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮುಸ್ಲಿಂ ಸಮುದಾಯದ ಮುಖಂಡರು ಮಠದೊಂದಿಗೆ ಇರಿಸಿಕೊಂಡಿರುವ ಭಾವನಾತ್ಮಕ ಸಂಬಂಧಗಳು ಅಜರಾಮರವಾಗಿರುತ್ತವೆ.