ತುಮಕೂರು: ರಾಜಕೀಯದ ವ್ಯವಸ್ಥೆ ಇಷ್ಟು ಹಾಳಾಗಲು ಕಾರಣ ಆ ಎರಡೂ ರಾಷ್ಟ್ರೀಯ ಪಕ್ಷಗಳೇ ಕಾರಣ. ಆ ಪಕ್ಷಗಳ ನಡುವೆ ದೊಡ್ಡ ವ್ಯತ್ಯಾಸ ಇಲ್ಲ. ಕಾಂಗ್ರೆಸ್, ಬಿಜೆಪಿ ಎಂಬ ಚರ್ಚೆ ಬೇಡ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಪರಿಷತ್ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ಹಾಳಾಗಿರುವ ವ್ಯವಸ್ಥೆಯಲ್ಲಿ ಎಲ್ಲರೂ ಸೇರಿದ್ದಾರೆ. ದೆಹಲಿ ಮಟ್ಟದಲ್ಲಿ ದೊಡ್ಡ ದೊಡ್ಡ ನಾಯಕರು ಸೇರಿ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದರು.
ತುಮಕೂರಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನಿಂದ ನಾನು ಎದೆಗುಂದಿಲ್ಲ. ಯಾವ ಜನ ನನ್ನ ಕೈಬಿಟ್ಟಿದ್ದಾರೋ ಅವರೇ ನನ್ನ ಎತ್ತಿಕೊಂಡು ಬರ್ತಾರೆ. ನಮ್ಮನ್ನ ತೆಗಿಯಬೇಕೆನ್ನೋದು ಕೆಲವರ ಅಭಿಪ್ರಾಯ ಎಂದರು.
ರಾಜಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಂದು ಪ್ರಚಾರ ಮಾಡುವಂತೆ ಕೇಳಿದ್ದರು. ಜ್ವರ ಬಂದು ಮಲಗಿದ್ದರೂ ಬಂದು ಪ್ರಚಾರ ಮಾಡಿದೆ. 800 ಮತಗಳಲ್ಲಿ ಅವರು ಗೆದ್ದರು. ತುಂಬಾ ಮಾತಾಡೋಕೆ ಹೋಗಲ್ಲಾ ನಾನು, ದೇವರಿದ್ದಾನೆ. ನಾನು ಸೋತಿರಬಹುದು ಆದರೆ ಕುಳಿತುಕೊಳ್ಳೋದಿಲ್ಲ ಎಂದರು.
ಇದನ್ನೂ ಓದಿ:ಪರಿಷತ್ ಚುನಾವಣೆ: ಜೆಡಿಎಸ್ ಬೆಂಬಲದ ಬಗ್ಗೆ ಇಂದು ಅಥವಾ ನಾಳೆ ತಿಳಿಯಲಿದೆ ಎಂದ ಬಿಎಸ್ವೈ