ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಏಕಾಏಕಿ ಆಸ್ತಿ ತೆರಿಗೆ, ಹೊಸ ನೀರಿನ ಸಂಪರ್ಕ ದರ ಹೆಚ್ಚಳ: ಆಕ್ರೋಶ

ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆಯದೇ ಏಕಾಏಕಿ ಆಸ್ತಿ ತೆರಿಗೆ ಹಾಗೂ ಹೊಸ ನೀರಿನ ಸಂಪರ್ಕ ದರ ಹೆಚ್ಚಳ ಮಾಡಲಾಗಿದೆ ಎಂದು ಪಾಲಿಕೆಯ ಪ್ರತಿ ಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ಆರೋಪಿಸಿದ್ದಾರೆ.

ಹೆಚ್.ಸಿ.ಯೋಗೀಶ್ ಸುದ್ದಿಗೋಷ್ಠಿ
ಹೆಚ್.ಸಿ.ಯೋಗೀಶ್ ಸುದ್ದಿಗೋಷ್ಠಿ

By

Published : Jan 15, 2021, 7:57 AM IST

ಶಿವಮೊಗ್ಗ: ಮಹಾನಗರ ಪಾಲಿಕೆ ಏಕಾಏಕಿ ಆಸ್ತಿ ತೆರಿಗೆ ಹಾಗೂ ಹೊಸ ನೀರಿನ ಸಂಪರ್ಕಕ್ಕೆ ದರ ಹೆಚ್ಚಳ ಮಾಡಿ ನಾಗರಿಕರ ಮೇಲೆ ಬರೆ ಎಳೆದಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ಆರೋಪಿಸಿದರು.

ಹೆಚ್.ಸಿ.ಯೋಗೀಶ್ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ ಅಂತ್ಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೋವಿಡ್‌ನಿಂದಾಗಿ ನಾಗರಿಕರು ಆರ್ಥಿಕ ಸಂಕಷ್ಟ ಅನುಭವಿಸಿರುವುದರಿಂದ ಆಸ್ತಿ ತೆರಿಗೆಯನ್ನು 2020-21ನೇ ಸಾಲಿನ ಬದಲಾಗಿ 2021-22 ನೇ ಸಾಲಿನಿಂದ ಹೆಚ್ಚಳ ಮಾಡುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಆಸ್ತಿ ತೆರಿಗೆ ಏಕಾಏಕಿ ಹೆಚ್ಚಳ ಮಾಡಲಾಗಿದೆ. ಎಲ್ಲ ಸದಸ್ಯರ ಅಭಿಪ್ರಾಯ ಪಡೆಯದೇ ಖಾಲಿ ನಿವೇಶನಕ್ಕೆ, ವಸತಿ ಉದ್ದೇಶದ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಹಾಗೂ ಕೈಗಾರಿಕಾ ಉದ್ದೇಶಿತ ಕಟ್ಟಡಗಳಿಗೆ ಶೇ.15 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.

ಹೊಸ ನೀರಿನ ಸಂಪರ್ಕಕ್ಕಾಗಿ ಈ ಹಿಂದೆ 2,500 ಇತ್ತು. ಈಗ ಅದನ್ನು ಸಹ ಹೆಚ್ಚಳ ಮಾಡಲಾಗಿದೆ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಕಾಂಗ್ರೆಸ್ ಪಾಲಿಕೆಯ ತಪ್ಪುಗಳ ಬಗ್ಗೆ ಹೋರಾಟ ಮಾಡುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದೇ ತಿರಸ್ಕರಿಸಲಾಗುತ್ತಿದೆ. ಆದರೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಈ ವೇಳೆ, ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಶಾಮೀರ್ ಖಾನ್, ಕಾಂಗ್ರೆಸ್ ಪಕ್ಷದ ಮುಖಂಡ ವಿಶ್ವನಾಥ್ ಕಾಶಿ ಇನ್ನಿತರರು ಉಪಸ್ಥಿತರಿದ್ದರು.

ABOUT THE AUTHOR

...view details