ಕರ್ನಾಟಕ

karnataka

ETV Bharat / city

ಲೋಕಪಾಲ್​ ಮೊದಲು ಜಾರಿಗೆ ತಂದಿದ್ದು ನಾನು: ಹೆಚ್​ ಡಿ ದೇವೇಗೌಡ - ಲೋಕಾಯುಕ್ತ

ಕರ್ನಾಟಕ ಬಿಟ್ಟರೆ ಬೇರೆ ರಾಜ್ಯದವರು ಲೋಕಾಯುಕ್ತರ ನೇಮಕ ಮಾಡಿರಲಿಲ್ಲ. ಮೊದಲ ಬಾರಿ ಜಾರಿಗೆ ತಂದಿದ್ದು ನಾನೇ ಎಂದು ಹೆಚ್.ಡಿ ದೇವೇಗೌಡರು ಪರೋಕ್ಷವಾಗಿ ಪ್ರಧಾನ ಮಂತ್ರಿ ಮೋದಿಗೆ ಚಾಟಿ ಏಟು ನೀಡಿದರು.

ಲೋಕಪಾಲ್ ಮಸೂದೆ ಜಾರಿ ಕುರಿತು ಹೆಚ್.ಡಿ ದೇವೇಗೌಡರ ಪ್ರತಿಕ್ರಿಯೆ

By

Published : Mar 17, 2019, 10:41 PM IST

ಶಿವಮೊಗ್ಗ: ಲೋಕಪಾಲ್ ಮಸೂದೆ ಇವತ್ತಿನದಲ್ಲ, ನರಸಿಂಗರಾಯರ ಕಾಲದಲ್ಲಿ ನಾನೇ ಅದನ್ನು ಕರ್ನಾಟಕದಲ್ಲಿ ಮೊದಲ ಬಾರಿ ಜಾರಿಗೆ ತಂದಿದ್ದು. ಈಗ ಸುಪ್ರೀಂ ಕೋರ್ಟ್ ಜಾರಿ ಮಾಡಿದ್ದು ಸಂತೋಷದ ವಿಚಾರ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಲೋಕಪಾಲ್ ನೇಮಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಂದು ಕರ್ನಾಟಕ ಬಿಟ್ಟರೆ ಬೇರೆ ರಾಜ್ಯದವರು ಲೋಕಾಯುಕ್ತರ ನೇಮಕ ಮಾಡಿರಲಿಲ್ಲ. ಇನ್ನು ಗುಜರಾತ್​ನಲ್ಲೂ ಸಹ ಲೋಕಪಾಲ್ ಜಾರಿಗೆ ತರಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ಮೋದಿಗೆ ಚಾಟಿ ಏಟು ನೀಡಿದರು.

ಅಣ್ಣ ಹಜಾರೆಯವರು ಲೋಕಪಾಲರಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. 1996 ರಲ್ಲಿ ಲೋಕಪಾಲ್ ಜಾರಿಗಾಗಿ ಸಮಿತಿ ರಚನೆ ಮಾಡಲಾಯಿತು. ಆ ಸಮಿತಿ ನೀಡಿದ ವರದಿಯ ಮೇರೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಲಾಯಿತು. ನನ್ನ ಕಾಲದ ನಂತ್ರ ಯಾರು ಸಹ ಲೋಕಪಾಲ್ ಜಾರಿಗೆ ತರಲು ಪ್ರಯತ್ನ ಮಾಡಲಿಲ್ಲ. ಈಗ ಸುಪ್ರೀಂ ಕೋರ್ಟ್ ಲೋಕಪಾಲರನ್ನು ನೇಮಕ ಮಾಡಿದೆ. ಸಂತೋಷದ ವಿಚಾರ. ಕೋರ್ಟ್​ನ ಆದೇಶವನ್ನು ನೋಡಿ ಮತ್ತೆ ಪ್ರತಿಕ್ರಿಯಿಸುತ್ತೆನೆ ಎಂದರು.

ಲೋಕಪಾಲ್ ಮಸೂದೆ ಜಾರಿ ಕುರಿತು ಹೆಚ್.ಡಿ ದೇವೇಗೌಡರ ಪ್ರತಿಕ್ರಿಯೆ

ಇನ್ನೂ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ತಮ್ಮ ಅಭಿಮಾನಿಗಳಿಗೆ ತಮ್ಮ ಹೆಸರಿನ ಮುಂದೆ ಚೌಕಿದಾರ್ ಅಂತ ಸೇರಿಸಿ ಕೊಳ್ಳಲು ನೀಡಿರುವ ಕರೆಗೆ ಪ್ರತಿಕ್ರಿಯಿಸಿದ ಗೌಡರು, ಇದು ಯುವಕರ ಮನಸ್ಸನ್ನು ಕೆಡಿಸುವ ಕೆಲ್ಸ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಒಂದು ವಿಷ್ಯವನ್ನು ಒಂದು ದಿನ, ಎರಡು ದಿನ ನೋಡಿ ಸುಮ್ಮನಾಗುತ್ತಾರೆ. ಆದ್ರೆ ಪದೇ ಪದೇ ಅದನ್ನು ಗೇಲಿ ಮಾಡುವುದು ಸರಿಯಲ್ಲ ಎಂದರು.

ABOUT THE AUTHOR

...view details