ಶಿವಮೊಗ್ಗ: ರಾಜ್ಯದ ಸಾತ್ವಿಕ, ಸರಳ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇಂದು ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ಪಾದಯಾತ್ರೆ ವೇಳೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಡ್ರಮ್ ಬಾರಿಸಿದ್ದಕ್ಕೆ ಗರಂ ಆದರು.
ಯಾರೇ ಆಗಲಿ ಆರೋಪ ಮಾಡುವಾಗ ಅದು ವೈಯಕ್ತಿಕವಾಗಿರಬೇಕು, ಅದನ್ನು ಬಿಟ್ಟು ಅವರ ಕುಟುಂಬದವರ ಮೇಲೆ ಮಾಡಬಾರದು ಹಾಗೂ ಅವರಿಗೆ ತೂಂದರೆ ನೀಡಬಾರದು. ಹೀಗೆ ಮಾಡಿದರೆ ನಾನು ಪಾದಯಾತ್ರೆಯಿಂದಲೇ ವಾಪಸ್ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಾದಯಾತ್ರೆ ವೇಳೆ ಆರಗ ಜ್ಞಾನೇಂದ್ರ ಮನೆ ಮುಂದೆ ಡ್ರಮ್ ಬಾರಿಸಿದ್ದಕ್ಕೆ ಗರಂ ಆದ ಕಿಮ್ಮನೆ ರತ್ನಾಕರ್ ಕಿಮ್ಮನೆ ರತ್ನಾಕರ್ ಅವರ ಪಾದಯಾತ್ರೆ:ಇಂದಿನಿಂದ ಮೇ 10ರ ವರೆಗೆ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ತೂಡಗಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಮರಳು ಗಣಿಗಾರಿಕೆಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಸುತ್ತಿದ್ದಾರೆ. ಸಚಿವ ಹಿಂಬಾಲಕರು ಪ್ರಕೃತಿ ಸಂಪತ್ತು ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ ಗೃಹ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಗೃಹ ಸಚಿವರ ಗ್ರಾಮವಾದ ಗುಡ್ಡೆಕೊಪ್ಪದಿಂದಲೇ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ಪಾದಯಾತ್ರೆಗೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾಗೋಡು ತಿಮ್ಮಪ್ಪನವರ ಪುತ್ರಿಯಾದ ರಾಜನಂದಿನಿ ಅವರು ಕಾಂಗ್ರೆಸ್ ಬಾವುಟವನ್ನು ಕಿಮ್ಮನೆ ರತ್ನಾಕತರ್ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಪಾದಯಾತ್ರೆಯು ಇಂದು ಗುಡ್ಡೆಕೊಪ್ಪದಿಂದ ಬೆಜ್ಜವಳ್ಳಿಯ ತನಕ ನಡೆಯಲಿದೆ. ನಾಳೆ ಬೆಜ್ಜವಳ್ಳಿಯಿಂದ ಮಂಡಗದ್ದೆಯ ತನಕ ಬರಲಿದೆ. ಮೇ 10ರಂದು ಶಿವಮೊಗ್ಗದಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ.
ಇದನ್ನೂ ಓದಿ:ಸರ್ಕಾರ ಬಿದ್ದರೂ ಪರ್ವಾಗಿಲ್ಲ ಕಿಂಗ್ ಪಿನ್ ಹೆಸರು ಹೇಳಿ: ಮಾಜಿ ಮುಖ್ಯಮಂತ್ರಿ HDKಗೆ ಆರಗ ಸವಾಲು