ದಾವಣಗೆರೆ:ನಿರಂತರ ಮಳೆಯಿಂದ ಮನೆ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಸದಸ್ಯರು ಪಾರಾಗಿರುವ ಘಟನೆ ಜಿಲ್ಲೆಯ ಸಂತೆಬೆನ್ನೂರಿನ ಉಪ್ಪಾರಹಟ್ಟಿಯಲ್ಲಿ ನಡೆದಿದೆ.
ಬಾರಿ ಮಳೆಯಿಂದಾಗಿ ಕುಸಿದ ಮನೆ: ಸ್ವಲ್ಪದರಲ್ಲೇ ಕುಟುಂಬಸ್ಥರು ಅಪಾಯದಿಂದ ಪಾರು
ದಾವಣಗೆರೆಯಲ್ಲಿ ನಿರಂತರ ಮಳೆಯಿಂದಾಗಿ ಮನೆಯೊಂದು ನೆಲಕ್ಕುರುಳಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬಸ್ಥರು ಪಾರಾಗಿದ್ದಾರೆ.
ಮನೆ ಕುಸಿತಗೊಂಡಿರುವುದು
ಸಂತೆಬೆನ್ನೂರಿನ ಉಪ್ಪಾರಹಟ್ಟಿಯ ಹನಮಂತಪ್ಪ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮನೆ ಕುಸಿಯುತ್ತಿರುವುದನ್ನು ಗಮನಿಸಿ ಮನೆಯೊಳಗಿದ್ದ ನಾಲ್ಕು ಜನ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Last Updated : Aug 8, 2019, 8:05 AM IST