ಕರ್ನಾಟಕ

karnataka

ETV Bharat / city

ಕಾಡು ಪ್ರಾಣಿಗಳ ಮಾಂಸ ಮಾರಾಟ ಯತ್ನ: ಐವರು ಆರೋಪಿಗಳು ಸೆರೆ - Five accused arrested in Mysore

ಕಡವೆ ಮತ್ತು ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಹುಣಸೂರು ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.

Five accused arrested in Mysore
ಬಂಧಿತ ಆರೋಪಿಗಳು

By

Published : Apr 5, 2022, 9:45 AM IST

ಮೈಸೂರು:ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಮತ್ತು ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಡವೆ ಮತ್ತು ಹೆಣ್ಣು ಮೂಷಿಕ ಜಿಂಕೆ (ಹೆಣ್ಣು ಕೂರೇ) ಬೇಟೆಯಾಡಿ ಶುಂಠಿ ಜಮೀನಿನ ಶೆಡ್​​ನಲ್ಲಿ ಮಾಂಸ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹುಣಸೂರು ವನ್ಯಜೀವಿ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಈ ವೇಳೆ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ 7 ಜನ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ 5 ದ್ವಿಚಕ್ರ ವಾಹನ, 2 ಒಂಟಿ ನಳಿಕೆ ಬಂದೂಕು ಹಾಗೂ ಕಡವೆ ಹಾಗೂ ಹೆಣ್ಣು ಮೂಷಿಕ ಜಿಂಕೆಯ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details