ಮೈಸೂರು:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ನಿನ್ನೆಯಿಂದ ಮತಯಾಚನೆ ಆರಂಭಿಸಿದ್ದು, ಜೆಡಿಎಸ್ ಮುಖಂಡರು ಗೈರಾಗಿದ್ದಾರೆ.
ಮೈಸೂರಿನಲ್ಲಿ ವಿಜಯಶಂಕರ್ ಮತಯಾಚನೆ... ಜೆಡಿಎಸ್ ಮುಖಂಡರು ಗೈರು - undefined
ಮತಯಾಚನೆ ಆರಂಭಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್. ಮತಯಾಚನೆ ವೇಳೆ ಜೆಡಿಎಸ್ ಮುಖಂಡರು ಗೈರು. ಗೊಂದಲಗಳು ಸದ್ಯದಲ್ಲಿಯೇ ನಿವಾರಣೆಯಾಗಲಿವೆ ಎಂದ ವಿಜಯಶಂಕರ್.
ಕೆ.ಆರ್.ಮೊಹಲ್ಲಾದ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮತಯಾಚನೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಒಟ್ಟಿಗೆ ನನ್ನ ಪರವಾಗಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಎರಡು ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.
ಜಿ.ಟಿ.ದೇವೇಗೌಡ ಅವರ ಮನೆಗೆ ತೆರಳಿದ್ದೆ. ಅವರು ಕಾರ್ಯಕ್ರಮದ ನಿಮಿತ್ತ ಹೊರಗೆ ಹೋಗಿದ್ದಾರೆ. ಅವರ ಪತ್ನಿಯೊಂದಿಗೆ ಮಾತನಾಡಿ ಬಂದಿದ್ದೇನೆ. ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಗೊಂದಲಗಳು ಸದ್ಯದಲ್ಲಿಯೇ ನಿವಾರಣೆಯಾಗಲಿವೆ ಎಂದರು.
TAGGED:
ಮತಯಾಚನೆ