ಮೈಸೂರು:
ಜಿಲ್ಲೆಯಲ್ಲಿಂದು 451 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 45,644ಕ್ಕೇರಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದ 1420 ಮಂದಿ ವಿವಿಧ ಆಸ್ಪತ್ರೆಗಳಿಂದ ಇಂದು ಡಿಸ್ಚಾಜ್೯ ಆಗಿದ್ದಾರೆ. ಒಟ್ಟಾರೆ 38,739 ಮಂದಿ ಈವರೆಗೆ ಡಿಸ್ಚಾಜ್೯ ಆಗಿದ್ದಾರೆ. 5979 ಸಕ್ರಿಯ ಪ್ರಕರಣಗಳಿವೆ. ಇಂದು ಇಬ್ಬರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಕೋವಿಡ್ ಗೆ ಈವರೆಗೆ 929 ಮಂದಿ ಸಾವನ್ನಪ್ಪಿದ್ದಾರೆ.
ಚಾಮರಾಜನಗರ:
ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿ... ಜಿಲ್ಲೆಯಲ್ಲಿಂದು 60 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5551ಕ್ಕೆ ಏರಿಕೆಯಾಗಿದೆ. ಇಂದು 120 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 640ಕ್ಕೆ ಇಳಿಕೆಯಾಗಿದೆ. 43 ಮಂದಿ ಸೋಂಕಿತರು ಐಸಿಯುನಲ್ಲಿದ್ದು 207 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 780 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಮಹಾಮಾರಿಗೆ ಕೊರೊನಾಗೆ ಇಬ್ಬರು ಬಲಿಯಾಗುವ ಮೂಲಕ 119 ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದ 80 ವರ್ಷದ ಮಹಿಳೆ ಕಳೆದ 11 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ 19 ರಂದು ಅಸುನೀಗಿದ್ದಾರೆ. ಮತ್ತೊಬ್ಬರು ಚಾಮರಾಜನಗರದ 62 ವರ್ಷದ ಮಹಿಳೆ ಕಳೆದ 10 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಚಿಕ್ಕಬಳ್ಳಾಪುರ:
ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿ... ಜಿಲ್ಲೆಯಲ್ಲಿ ಇಂದು 157 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿದ್ದು, 107 ಸೋಂಕಿತರು ಬಿಡುಗಡೆಯಾಗಿದ್ದಾರೆ. ಚಿಕ್ಕಬಳ್ಳಾಪುರ 47, ಬಾಗೇಪಲ್ಲಿ 38, ಚಿಂತಾಮಣಿ 13, ಗೌರಿಬಿದನೂರು 5, ಗುಡಿಬಂಡೆ 7, ಶಿಡ್ಲಘಟ್ಟ 47 ಸೋಂಕಿತರು ಧೃಡಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 10,321ಕ್ಕೆ ಏರಿಕೆಯಾಗಿದೆ.
ಇನ್ನೂ ಚಿಕ್ಕಬಳ್ಳಾಪುರ 28, ಬಾಗೇಪಲ್ಲಿ 14, ಚಿಂತಾಮಣಿ 33, ಗೌರಿಬಿದನೂರು 15, ಗುಡಿಬಂಡೆ 8, ಶಿಡ್ಲಘಟ್ಟ 9 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಗುಣಮುಖಗೊಂಡವರ ಸಂಖ್ಯೆ 9143 ಕ್ಕೆ ಏರಿಕೆಯಾಗಿದೆ.