ಕರ್ನಾಟಕ

karnataka

ETV Bharat / city

ಪಾರಂಪರಿಕ ದೇವರಾಜ ಮಾರುಕಟ್ಟೆ ನೆಲಸಮ ಮಾಡುವುದು ಸಮಂಜಸವಲ್ಲ: ಪ್ರಮೋದಾ ದೇವಿ ಒಡೆಯರ್

ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ್ ಪ್ಯಾಲೇಸ್ ಕೂಡ ಶಿಥಿಲಾವಸ್ಥೆಯಲ್ಲಿ ಇತ್ತು. ಅದನ್ನ ಪುನಶ್ಚೇತನಗೊಳಿಸುವ ಕೆಲಸವನ್ನ ನಾವು ಮಾಡುತ್ತೇವೆ. ಹಾಗೆ ಪ್ರಯತ್ನ ಮಾಡಿದರೇ ಯಾವುದು ಆಗಲ್ಲ ಅನ್ನೋ ಹಾಗಿಲ್ಲ. ಅದೇ ರೀತಿ ದೇವರಾಜ ಮಾರುಕಟ್ಟೆಯನ್ನ ಪ್ರಯತ್ನ ಮಾಡಿದರೇ ಉಳಿಸಿಕೊಳ್ಳಬಹುದು..

Pramoda Devi Wadiyar
ರಾಜಮಾತೆ ಪ್ರಮೋದಾ ದೇವಿ ಒಡೆಯರ್

By

Published : Apr 22, 2022, 2:12 PM IST

ಮೈಸೂರು :ಪಾರಂಪರಿಕ ದೇವರಾಜ ಮಾರುಕಟ್ಟೆ ನೆಲಸಮ ಮಾಡುವುದು ಸಮಂಜಸವಲ್ಲ. ಸರ್ಕಾರ ಸಹಕಾರದ ಭರವಸೆ ನೀಡಿದರೇ ನಾವೇ ಅದನ್ನ ಪುನಶ್ಚೇತನಗೊಳಿಸುತ್ತೇವೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ 'ಜಯಚಾಮರಾಜೇಂದ್ರ ಒಡೆಯರ್' ಪ್ರತಿಮೆ ಅನಾವರಣಗೊಳಿಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಅನಾವರಣಗೊಳಿಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್..

ಚಾಮುಂಡಿ ಬೆಟ್ಟದಲ್ಲಿ ಗ್ರಾಮಸ್ಥರು ಮಹಾರಾಜರ ಕೊಡುಗೆಯನ್ನ ಸ್ಮರಿಸುವ ಕೆಲಸ ಮಾಡಿದ್ದಾರೆ. ಅವರಿಗೆ ತಾಯಿ ಚಾಮುಂಡಿ ಒಳ್ಳೆಯದನ್ನ ಮಾಡಲಿ ಎಂದರು. ಇನ್ನು ದೇವರಾಜ ಮಾರುಕಟ್ಟೆ ನೆಲಸಮ ಮಾಡುವುದು ಸಮಂಜಸವಲ್ಲ. ಅದನ್ನು ಉಳಿಸಿಕೊಳ್ಳಲು ಯಾವುದೇ ತೊಂದರೆಯಿಲ್ಲ.

ಪಾರಂಪರಿಕ ತಜ್ಞರ ಸಮಿತಿಯಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿದೆ. ಸರಿಯಾದ ತಜ್ಞರನ್ನ ನೇಮಕ ಮಾಡಿ ಪರಿಶೀಲನೆ ಮಾಡಿದರೇ ಮಾರುಕಟ್ಟೆಯನ್ನ ಪುನಶ್ಚೇತನಗೊಳಿಸಬಹುದು. ಆ ಕೆಲಸವನ್ನ ಸರ್ಕಾರ ಮಾಡುವ ಭರವಸೆ ಇದೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ್ ಪ್ಯಾಲೇಸ್ ಕೂಡ ಶಿಥಿಲಾವಸ್ಥೆಯಲ್ಲಿ ಇತ್ತು. ಅದನ್ನ ಪುನಶ್ಚೇತನಗೊಳಿಸುವ ಕೆಲಸವನ್ನ ನಾವು ಮಾಡುತ್ತೇವೆ. ಹಾಗೆ ಪ್ರಯತ್ನ ಮಾಡಿದರೇ ಯಾವುದು ಆಗಲ್ಲ ಅನ್ನೋ ಹಾಗಿಲ್ಲ. ಅದೇ ರೀತಿ ದೇವರಾಜ ಮಾರುಕಟ್ಟೆಯನ್ನ ಪ್ರಯತ್ನ ಮಾಡಿದರೇ ಉಳಿಸಿಕೊಳ್ಳಬಹುದು.

ಸರ್ಕಾರ ಭರವಸೆ ನೀಡಿದರೇ ನಾವೇ ಪುನಶ್ಚೇತನಗೊಳಿಸುತ್ತೇವೆ. ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಎಮೋಷನ್ ಇದೆ. ಆದ್ದರಿಂದ ಸರ್ಕಾರ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಆ ರೀತಿ ಎಲ್ಲರ ಅಭಿಪ್ರಾಯ ಪಡೆದರೆ ಪ್ರತಿಭಟನೆಗಳು ಆಗುವುದಿಲ್ಲ ಎಂದರು. ಇನ್ನು ಕೋಮು ಸಾಮರಸ್ಯ ಹಿಂದಿನಿಂದಲೂ ಮೈಸೂರು ಅರಮನೆಯಲ್ಲಿ ಪಾಲಿಸುತ್ತ ಬಂದಿದ್ದೇವೆ.‌ ಶಾಂತಿ, ನೆಮ್ಮದಿಗಾಗಿ ಕೋಮು ಸಾಮರಸ್ಯ ಮುಖ್ಯ ಎಂದರು.

ಪುತ್ಥಳಿ ಅನಾವರಣ :ಚಾಮುಂಡಿ ಬೆಟ್ಟದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 3 ಅಡಿ ಅಗಲ ಹಾಗೂ 3 ಅಡಿ ಉದ್ದವಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ಸ್ಥಳೀಯ ಶಾಸಕ ಜಿ ಟಿ ದೇವೇಗೌಡ ಸೇರಿ ಮತ್ತಿತರರು ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಮೈಸೂರಿನ ಶಿಥಿಲಾವಸ್ಥೆಯ ಎರಡು ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ನಿರ್ಧಾರ

ABOUT THE AUTHOR

...view details