ಮೈಸೂರು: ಕಾಡಾನೆ ದಾಳಿಗೆ ಆದಿವಾಸಿ ವೃದ್ಧನೊಬ್ಬ ಮೃತಪಟ್ಟಿದ್ದು, ಆತನ ಜೊತೆಯಿದ್ದ ಯುವಕ ಪ್ರಾಣಾಪಾಯದಿಂದ ಪಾರಾದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ. ಆನೆಮಾಳ ಹಾಡಿಯ ಪುಟ್ಟಪ್ಪ (75) ಮೃತ ದುರ್ದೈವಿ.
ಬುಧವಾರ ರಾತ್ರಿ ಆನೆಮಾಳ ಹಾಡಿಯತ್ತ ಪುಟ್ಟಪ್ಪ ಹಾಗೂ ಮತ್ತೊಬ್ಬ ಯುವಕ ಧಾವಿಸುತ್ತಿದ್ದ ವೇಳೆ ಕಾಡಾನೆಯೊಂದು ಎದುರಾಗಿದ್ದು, ವೃದ್ಧನ ಮೇಲೆ ದಾಳಿ ನಡೆಸಿದೆ. ಈ ವೇಳೆ, ವೃದ್ಧನ ಜೊತೆಗಿದ್ದ ಯುವಕ ಸ್ಥಳದಿಂದ ಪರಾರಿಯಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.