ಕರ್ನಾಟಕ

karnataka

ETV Bharat / city

ಹರಕೆ ಮುಡಿ ಕೂದಲಿನ ಹಕ್ಕು ನಂಜುಂಡೇಶ್ವರ ದೇವಸ್ಥಾನಕ್ಕೆ.. ನ್ಯಾಯಾಲಯದ ಐತಿಹಾಸಿಕ ತೀರ್ಪು

ನಂಜನಗೂಡು ದೇವಾಲಯ ಹಾಗೂ ನಯನಜ ಕ್ಷತ್ರಿಯ ಸಂಘದ ನಡುವೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ 25 ವರ್ಷಗಳ ವಾದವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಮುಡಿ ಹಾಗೂ ಹರಕೆ ಮುಡಿ ಕೂದಲಿನ ಹಕ್ಕು ನಂಜುಂಡೇಶ್ವರನ ಆಡಳಿತ ಮಂಡಳಿಗೆ ಸೇರಿದ್ದು ಎಂದು ತಿ. ನರಸೀಪುರ ಸಿವಿಲ್ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.

Mysore
ಹರಕೆ ಮುಡಿ ಕೂದಲಿನ ಹಕ್ಕು ನಂಜುಂಡೇಶ್ವರ ದೇವಸ್ಥಾನಕ್ಕೆ

By

Published : Jun 9, 2021, 12:36 PM IST

ಮೈಸೂರು:ಮುಡಿ ಹಾಗೂ ಹರಕೆ ಮುಡಿ ಕೂದಲಿನ ಹಕ್ಕು ನಂಜುಂಡೇಶ್ವರ ದೇವಾಲಯದ ಆಡಳಿತ ಮಂಡಳಿಗೆ ಸೇರಿದ್ದು ಎಂದು ತಿ. ನರಸೀಪುರ ಸಿವಿಲ್ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.

ನಂಜನಗೂಡು ದೇವಾಲಯ ಹಾಗೂ ನಯನಜ ಕ್ಷತ್ರಿಯ ಸಂಘದ ನಡುವೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ 25 ವರ್ಷಗಳ ವಾದ-ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಮುಡಿ ಕೂದಲು ತೆಗೆಯುವ ಮತ್ತು ಮುಡಿ ಕೂದಲಿನ ಸಂಪೂರ್ಣ ಹಕ್ಕು ತಮ್ಮದೇ ಎಂದು ನಯನಜ ಕ್ಷತ್ರಿಯ ಸಂಘ ದಾವೆ ಹೂಡಿತ್ತು. ಮುಡಿ ಕೂದಲಿನ‌ ಸಂಪೂರ್ಣ ಹಕ್ಕು ದೇವಾಲಯಕ್ಕೇ ಸೇರಿದ್ದೆಂದು ಆಡಳಿತ ಮಂಡಳಿ ಪ್ರತಿಪಾದನೆ ಮಾಡಿತ್ತು.

25 ವರ್ಷಗಳ‌ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಮುಡಿ ಹಾಗೂ ಹರಕೆ ಮುಡಿ ಕೂದಲಿನ ಹಕ್ಕು ನಂಜುಂಡೇಶ್ವರ ದೇವಾಲಯದ ಆಡಳಿತ ಮಂಡಳಿಗೆ ಸೇರಿದ್ದು ಎಂದು ಅಂತಿಮ ತೀರ್ಪು ಪ್ರಕಟಿಸಿದೆ.

ಮುಡಿ ತೆಗೆಯುವ ಹಕ್ಕು ನಯನಜ ಕ್ಷತ್ರಿಯ ಸಂಘಕ್ಕೆ ಸೇರಿದ್ದು ಎಂದು ಪ್ರತಿಪಾದಿಸುವುದನ್ನು ನ್ಯಾಯಾಲಯವು ಸಾರಾಸಗಟಾಗಿ ತಳ್ಳಿಹಾಕಿ, ನಂಜನಗೂಡಿನ ನಯಜನ ಕ್ಷತ್ರಿಯ ಜನಾಂಗದವರು ಮುಡಿ ಕೆಲಸವನ್ನು ಮಾಡಲು ಅವಕಾಶವಿದೆ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ T5 ಸೂತ್ರ: 8 ಜನರನ್ನೊಳಗೊಂಡ ಸಮಿತಿ ರಚನೆ

ABOUT THE AUTHOR

...view details