ಮೈಸೂರು:ನಂಜನಗೂಡಿನಿಂದ ನೋಯ್ಡಾಗೆ ಅಡುಗೆ ಕೆಲಸಕ್ಕೆ ಹೋಗಿದ್ದ ಅಡುಗೆ ಭಟ್ಟರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾ ರೈಲ್ವೆ ಟ್ರ್ಯಾಕ್ನಲ್ಲಿ ಶವವಾಗಿ ಪತ್ತೆಯಾದ ನಂಜನಗೂಡಿನ ಅಡುಗೆ ಭಟ್ಟ - ಮೈಸೂರು
ಅಡುಗೆ ಕೆಲಸಕ್ಕೆಂದು ನಂಜನಗೂಡಿನಿಂದ ಉತ್ತರ ಪ್ರದೇಶ ರಾಜ್ಯದ ನೋಯ್ಡಾಗೆ ಹೋಗಿದ್ದ ಅಡುಗೆ ಭಟ್ಟರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನೋಯ್ಡಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವಿಷಯವನ್ನು ಮೃತರ ಸಂಬಂಧಿಕರಿಗೆ ನೋಯ್ಡಾ ರೈಲ್ವೆ ಪೊಲೀಸರು ತಿಳಿಸಿದ್ದು, ಮೃತನ ಸಂಬಂಧಿಕರು ಮೃತದೇಹ ತರಲು ನೋಯ್ಡಾಗೆ ತೆರಳಿದ್ದಾರೆ.
ನಂಜನಗೂಡಿನ ಅಡುಗೆ ಭಟ್ಟ
ನಂಜನಗೂಡಿನ ಪ್ರಸಿದ್ಧ ಅಡುಗೆ ಭಟ್ಟರು ಹಾಗೂ ಪುರಸಭಾ ಮಾಜಿ ಸದಸ್ಯರಾದ ದಿವಂಗತ ಶ್ರೀಪತಿ ಅವರ ಪುತ್ರ ಹರ್ಷ, ನಂಜನಗೂಡಿನಿಂದ ಅಡುಗೆ ಕೆಲಸಕ್ಕಾಗಿ ತೆರಳಿದ್ದರು. ಅಲ್ಲದೆ ರಾಜ್ಯದಿಂದ ಹೋಗುವ ಪ್ರವಾಸಿಗರಿಗೆ ಗೈಡ್ ಆಗಿ ಕಳೆದ 6-7 ವರ್ಷದಿಂದ ನೋಯ್ಡಾ, ಕಾಶಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ಕೆಲಸ ಮಾಡಿಕೊಂಡಿದ್ದರು.
ಇವರ ಮೃತದೇಹ ನೋಯ್ಡಾದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ವಿಷಯವನ್ನು ಮೃತರ ಸಂಬಂಧಿಕರಿಗೆ ನೋಯ್ಡಾ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇದರನ್ವಯ ಮೃತನ ಸಂಬಂಧಿಕರು ಮೃತದೇಹ ತರಲು ನೋಯ್ಡಾಗೆ ತೆರಳಿದ್ದಾರೆ.