ಮೈಸೂರು: ಮುಂಗಾರು ಮಳೆ ಕೈ ಕೊಟ್ಟಿತು ಮುಂದೇನು ಮಾಡಬೇಕು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಅನ್ನದಾತನಿಗೆ ಕಬಿನಿ ಅಬ್ಬರ ಅಚ್ಚರಿಯನ್ನುಂಟು ಮಾಡಿದೆ.
ಕೈ ಕೊಟ್ಟ ಮುಂಗಾರು.. ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದ ಕಬಿನಿ.. - ವೈನಾಡು
ಕಳೆದ 15 ದಿನಗಳ ಹಿಂದೆ ವೈನಾಡು ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಬಿನಿ ಜಲಾಶಯ ಬಹುಬೇಗ ತುಂಬಿಕೊಂಡಿತು. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾದಂತೆ 1.25 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಯಿತು. ಪರಿಣಾಮ ಹಲವು ವರ್ಷಗಳಿಂದ ತುಂಬದೇ ಇದ್ದ ಕೆರೆಕಟ್ಟೆಗಳು ತುಂಬಿ ನಾಲೆ, ಉಪನಾಲೆ ಹಾಗೂ ಸಣ್ಣ ನಾಲೆಗಳಲ್ಲಿಯೂ ನೀರು ಕಾಣುವಂತಾಗಿದೆ.
ಕಳೆದ 15 ದಿನಗಳ ಹಿಂದೆ ವೈನಾಡು ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಬಿನಿ ಜಲಾಶಯ ಬಹು ಬೇಗ ತುಂಬಿಕೊಂಡಿತು. ಆದ್ದರಿಂದ ಆರಂಭದಲ್ಲಿ 30 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾದಂತೆ 1.25 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟ ಪರಿಣಾಮ ಹೆಚ್‌ಡಿಕೋಟೆ, ನಂಜನಗೂಡು ಸೇರಿದಂತೆ ಹಲವಾರು ಸೇತುವೆಗಳು ಮುಳುಗಿ, ಮನೆಗಳು ಕೂಡ ಹಾನಿಯಾದವು.
ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮಳೆಯಿಂದ ಹಲವು ವರ್ಷಗಳಿಂದ ತುಂಬದೇ ಇದ್ದ ಕೆರೆಕಟ್ಟೆಗಳು ತುಂಬಿ ನಾಲೆ, ಉಪನಾಲೆ ಹಾಗೂ ಸಣ್ಣ ನಾಲೆಗಳಲ್ಲಿಯೂ ನೀರು ಕಾಣುವಂತಾಗಿದೆ. ಮುಂಗಾರು ಆರಂಭದಲ್ಲಿಯೇ ರೈತರಿಗೆ ನಿರಾಶೆ ಮೂಡಿಸಿದ್ರೂ ಅಂತ್ಯದಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಮೈಸೂರು ಜಿಲ್ಲೆಯಲ್ಲಿ ಶೇ.54ರಷ್ಟು ಮಾತ್ರ ಕೃಷಿ ಚಟುವಟಿಕೆಗಳು ನಡೆದಿತ್ತು. ಆದರೆ, ಈಗ ಕಬಿನಿ ಅಬ್ಬರ ತಗ್ಗಿದ ನಂತರ ರೈತರು ಜಮೀನುಗಳ ಕಡೆ ಮುಖ ಮಾಡುತ್ತಿದ್ದು, ನದಿ ಪಾತ್ರದಲ್ಲಿದ್ದ ಜಮೀನುಗಳಿಗೆ ಬಹಳಷ್ಟು ಅನಾನುಕೂಲವಾದರೆ, ದೂರವಿರುವ ಕೃಷಿಕರಿಗೆ ಅನುಕೂಲ ಮಾಡಿಕೊಟ್ಟಿದೆ.