ಮೈಸೂರು:ಲಾಕ್ಡೌನ್ ನಡುವೆಯೂ ನಂಜುಂಡೇಶ್ವರ ದೇವಾಲಯದಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ವಿಶೇಷ ಹೋಮ ಮತ್ತು ಪೂಜೆ ನೆರವೇರಿಸಿ ಕೊರೊನಾ ವೈರಸ್ ಸಂಕಷ್ಟದಿಂದ ಎಲ್ಲರನ್ನೂ ಪಾರು ಮಾಡುವಂತೆ ಬೇಡಿಕೊಂಡರು.
ಕೊರೊನಾದಿಂದ ಪಾರು ಮಾಡುವಂತೆ ನಂಜುಂಡೇಶ್ವರನಲ್ಲಿ ಬೇಡಿಕೊಂಡ ಶಾಸಕರು.. - ನಂಜನಗೂಡಿನ ನಂಜುಂಡೇಶ್ವರ ದೇವಾಲಯ
ಕೊರೊನಾದಿಂದ ತತ್ತರಿಸಿರುವ ನಂಜನಗೂಡಿನ ಕಷ್ಟವನ್ನು ಪರಿಹರಿಸು. ನಮ್ಮ ತಾಲೂಕು ಅಲ್ಲದೆ, ಜಗತ್ತನ್ನೇ ಕಾಪಾಡು ಎಂದು ಹೋಮ-ಹವನ ಮಾಡಿಸಿದರು.
ನಂಜುಡೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ
ಲಾಕ್ಡೌನ್ ಹಿನ್ನೆಲೆಯಲ್ಲಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಮುಚ್ಚಲಾಗಿದೆ. ಕೊರೊನಾದಿಂದ ತತ್ತರಿಸಿರುವ ನಂಜನಗೂಡಿನ ಕಷ್ಟವನ್ನು ಪರಿಹರಿಸು. ನಮ್ಮ ತಾಲೂಕು ಅಲ್ಲದೆ, ಜಗತ್ತನ್ನೇ ಕಾಪಾಡು ಎಂದು ಹೋಮ-ಹವನ ಮಾಡಿಸಿದರು. ದೇವಾಲಯದಲ್ಲಿ ಶಾಸಕರ ಆಪ್ತರು ಇದ್ದರು.