ಕರ್ನಾಟಕ

karnataka

ETV Bharat / city

ನಾವು ಮೂರಕ್ಕೆ ಮೂರೂ ಉಪ ಚುನಾವಣೆ ಗೆಲ್ಲುತ್ತೇವೆ‌: ವಿ.ಸೋಮಣ್ಣ - Minister V Somanna reaction about by election

ಅನಿರೀಕ್ಷಿತವಾಗಿ ಬಂದ ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆವನ್ನು ನಾವು ಗೆಲ್ಲುತ್ತೇವೆ ಎಂದು ವಸತಿ ಸಚಿವ ಸೋಮಣ್ಣ ಮೈಸೂರಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ವಿ.ಸೋಮಣ್ಣ
ವಿ.ಸೋಮಣ್ಣ

By

Published : Apr 17, 2021, 11:37 AM IST

ಮೈಸೂರು: ಅನಿರೀಕ್ಷಿತವಾಗಿ ಬಂದ ಉಪ ಚುನಾವಣೆ ಇದು, ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ‌ ಎಂದು ವಸತಿ ಸಚಿವ ಸೋಮಣ್ಣ ಮೈಸೂರಿನಲ್ಲಿ ಹೇಳಿದರು.

ಇಂದು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಯನ್ನು ನಾವು ಗೆಲ್ಲುತ್ತೇವೆ. ಹಣ ಹಂಚಿ ಉಪಚುನಾವಣೆಯನ್ನು ಬಿಜೆಪಿಯವರು ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್​ನವರು ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ಈಗ ಇಲ್ಲ ಎಂದರು.

ಐದು ದಿನಗಳಲ್ಲಿ ಮುಖ್ಯಮಂತ್ರಿಗಳು ಗುಣಮುಖರಾಗುತ್ತಾರೆ. ಆ ನಂತರ ಸರ್ವ ಪಕ್ಷದ ಸಭೆ ಕರೆಯುತ್ತಾರೆ. ನಾನು ಕೂಡ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ ಅದು ನೆಗೆಟಿವ್ ಬಂದಿದೆ. ನಮ್ಮ ಸಿಬ್ಬಂದಿ ವರ್ಗದವರಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಲಾಕ್​ಡೌನ್ ಅವಶ್ಯಕತೆ ಇದೆ. ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್​ ಸ್ವಲ್ಪ ಹತೋಟಿಗೆ ತರಬೇಕಿದೆ. ಅದನ್ನು‌ ಮುಖ್ಯಮಂತ್ರಿಗಳು ಮಾಡಲಿದ್ದಾರೆ‌ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ABOUT THE AUTHOR

...view details