ಕರ್ನಾಟಕ

karnataka

ETV Bharat / city

ಪ್ರಕರಣ ಭೇದಿಸಿದ ರೈಲ್ವೆ ಪೊಲೀಸರು: ಒಂದೂವರೆ ಕೆಜಿ ಚಿನ್ನ ವಶ - ಚಿನ್ನ ವಶ

ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ರೈಲ್ವೇ ಪೊಲೀಸರ ಕಾರ್ಯಚರಣೆಗೆ 45 ಲಕ್ಷದ ಚಿನ್ನ ವಶ

By

Published : Mar 18, 2019, 11:49 PM IST

ಮೈಸೂರು: ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಕೆಜಿಗಟ್ಟಲೆ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿ, ಅವರಿಂದ 45 ಲಕ್ಷ ರೂ. ಮೌಲ್ಯದ ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಳ್ಳುವಲ್ಲಿ ಮೈಸೂರು ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ 5 ತಿಂಗಳ ಹಿಂದೆ ಬೆಂಗಳೂರು ಮೂಲದ ನವೀನ್ ಕುಮಾರ್ ಎಂಬಾತ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಹೊರಟ ಸಂದರ್ಭದಲ್ಲಿ ರೈಲಿನ ಒಳಗಡೆ ಬಂದ 5 ಜನ ಅಪರಿಚಿತರು ಹೆದರಿಸಿ, 2 ಕೆಜಿ 300ಗ್ರಾಂ ತೂಕದ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ 5 ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿ ಟಿವಿಯಿಂದ ಗೊತ್ತಾಗಿತ್ತು.

ರೈಲ್ವೇ ಪೊಲೀಸರ ಕಾರ್ಯಚರಣೆಗೆ 45 ಲಕ್ಷದ ಚಿನ್ನ ವಶ

ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಮಾಲಂಗಿ ಮತ್ತು ವಲ್ವಾಡ್ ಗ್ರಾಮದ ರಮೇಶ್ ಹಿಟ್ಟಂಕರ್, ಮಾರುತಿ, ಅನಂತ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಾಗ 1 ಕೆಜಿ 500 ಗ್ರಾಂ ಚಿನ್ನ ಸಿಕ್ಕಿದೆ. ಉಳಿದ ಇಬ್ಬರು ಆರೋಪಿಗಳಾದ ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ತಲೆಮರೆಸಿಕೊಂಡಿದ್ದಾರೆ.5 ತಿಂಗಳ ನಂತರ ರೈಲ್ವೆ ಪೊಲೀಸರು ಪ್ರಕರಣ ಭೇದಿಸಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ABOUT THE AUTHOR

...view details