ಕರ್ನಾಟಕ

karnataka

By

Published : Apr 16, 2022, 7:01 PM IST

ETV Bharat / city

ಹೆಬ್ಬಾಳ ಕೆರೆ ನೀರು ಕಲುಷಿತ : ಜೀವ ಕಳೆದುಕೊಂಡ ಸಾವಿರಾರು ಮೀನುಗಳು

ಅನೇಕ ವರ್ಷಗಳ ಹಿಂದೆ ನೀರು ಕಲುಷಿತಗೊಂಡು ಮೀನುಗಳು ಸತ್ತ ಹಿನ್ನೆಲೆ ಇನ್ಫೋಸಿಸ್​ ವತಿಯಿಂದ ಹೆಬ್ಬಾಳ ಕೆರೆಯನ್ನು ಸ್ವಚ್ಛಗೊಳಿಸಲಾಗಿತ್ತು. ಆದರೆ, ಇದೀಗ ಮತ್ತೆ ಕೆರೆ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಜೀವ ಕಳೆದುಕೊಂಡು ಕೆರೆ ದಡದಲ್ಲಿ ತೇಲುತ್ತಿವೆ..

hebbala-pond-water-polluted-thousands-of-fish-lost-their-lives
ಹೆಬ್ಬಾಳ ಕೆರೆ ನೀರು ಕಲುಷಿತ: ಜೀವ ಕಳೆದುಕೊಂಡ ಸಾವಿರಾರು ಮೀನುಗಳು

ಮೈಸೂರು :ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ವಚ್ಛಗೊಳಿಸಿದ್ದ ಹೆಬ್ಬಾಳ ಕೆರೆಗೆ ಪುನಃ ಕೊಳಚೆ ನೀರು ಹಾಗೂ ಕೈಗಾರಿಕಾ ಪ್ರದೇಶದ ನೀರು ಹರಿದು ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಒಳಚರಂಡಿ ಕೊಳಚೆ ನೀರು ಹಾಗೂ ಸುತ್ತಮುತ್ತಲಿನ ಬಡಾವಣೆಗಳ‌ ಕಲುಷಿತ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ಕೆರೆಗೆ ಸೇರುತ್ತಿರುವುದರಿಂದ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳ ಕೆರೆ ನೀರು ಕಲುಷಿತ : ಜೀವ ಕಳೆದುಕೊಂಡ ಸಾವಿರಾರು ಮೀನುಗಳು

ಜೊತೆಗೆ ಕೆರೆಯ ಸುತ್ತಮುತ್ತ ಹರಡಿರುವ ತ್ಯಾಜ್ಯವು ಎರಡು ಮೂರು ದಿನಗಳಿಂದ ಬರುತ್ತಿರುವ ಮಳೆಯಿಂದ ಕೆರೆಗೆ ಸೇರಿದೆ. ನೀರಿನಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮೀನುಗಳು ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಿದ್ದಾರೆ. ಕೆರೆಯಲ್ಲಿ ಸತ್ತಿರುವ ಸಾವಿರಾರು ಮೀನುಗಳು ಕೆರೆಯ ದಡದಲ್ಲಿದ್ದು, ಇದರಿಂದ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ವರ್ಷಗಳ ಹಿಂದೆ ಈ ಕೆರೆಯ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪಿದ್ದವು‌. ನಂತರ ಇನ್ಫೋಸಿಸ್ ಸಂಸ್ಥೆಯ ಸಿಎಸ್ಆರ್ ಅನುದಾನದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಲಾಗಿತ್ತು. ಆದರೆ, ಹೆಬ್ಬಾಳ ಕೈಗಾರಿಕಾ ಪ್ರದೇಶದ ತ್ಯಾಜ್ಯ ಹಾಗೂ ಬಡಾವಣೆಗಳ‌ ತ್ಯಾಜ್ಯ ಹಾಗೂ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವುದರಿಂದ ಕೆರೆಯ ನೀರು ಕಲುಷಿತಗೊಂಡು ಮೀನುಗಳು ಸಾಯುತ್ತಿವೆ ಎಂದು ಕುಂಬಾರಕೊಪ್ಪಲಿನ ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ನೋಡುಗರ ಕಣ್ಮನ ಸೆಳೆದ ಕೆರೆ ಬೇಟೆ ಹಬ್ಬ

ABOUT THE AUTHOR

...view details