ಮೈಸೂರು: ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹೇಶ್ ಮೃತ ಬಾಲಕ. ಈತನ ಮೂವರು ಸಹಪಾಠಿಗಳು ಹಾಗೂ ಹೆಮ್ಮರಗಾಲದ ಶ್ರೀನಿವಾಸ್, ರಾಜು, ನವೀನ್ ಮತ್ತು ಮುದ್ದು ಎಂಬುವರ ವಿರುದ್ಧ ಬಾಲಕನ ತಂದೆ ಸಿದ್ದರಾಜು ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ ?:
ಜ.2 ರಂದು ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿ ಮಹೇಶ್ ಅಲಿಯಾಸ್ ಮನು ಹಳೇಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈತನ ಸಹಪಾಠಿಗಳು ಮಹೇಶ್ನನ್ನ ಕೆರೆ ಬಳಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.
ಹೆಮ್ಮರಗಾಲದ ರಾಜು, ಶ್ರೀನಿವಾಸ್ ಶೆಟ್ಟಿ, ಮುದ್ದು ಹಾಗೂ ನವೀನ ಎಂಬುವರು ಮಾಟ - ಮಂತ್ರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದು,ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಮಹೇಶ್ ಸಹಪಾಠಿಗಳಿಗೆ ಹೇಳಿದ್ದಾರೆ. ಅದರಂತೆ ಮಹೇಶ್ನನ್ನು ಕೆರೆ ಬಳಿ ಕರೆದುಕೊಂಡು ಹೋಗಿ ಸಾಯಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ:ಐಎಸ್ ಸಂಪರ್ಕದಲ್ಲಿ ಯುವಕ-ಯುವತಿಯರು..ದೇಶ ವಿರೋಧಿ ಚಟುವಟಿಕೆಯ ತಾಣವಾಗುತ್ತಿದೆಯಾ ಕಾಶ್ಮೀರ, ಮಂಗಳೂರು, ಬೆಂಗಳೂರು!