ಕರ್ನಾಟಕ

karnataka

ETV Bharat / city

ಪಾರ್ಟಿಯಲ್ಲಿ ಗಲಾಟೆ, ಕೊಲೆ ಯತ್ನ ಆರೋಪ: ಮೈಸೂರು ಮಾಜಿ ಉಪ ಮೇಯರ್ ವಿರುದ್ಧ FIR - mysuru crime news

ಪಾರ್ಟಿಯಲ್ಲಿ ನಡೆದ ಗಲಾಟೆ ಸಂಬಂಧ ಮೈಸೂರು ಮಾಜಿ ಉಪ ಮೇಯರ್ ಅರ್ಜುನ್ ಹಾಗೂ ಮೂವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

fir
fir

By

Published : Oct 12, 2021, 8:30 AM IST

ಮೈಸೂರು: ನಗರದ ಸೋಷಿಯಲ್ ಕ್ಲಬ್​​ನಲ್ಲಿ ನಡೆದ ಪಾರ್ಟಿಯ ವೇಳೆ ಗಲಾಟೆ ನಡೆದಿದ್ದು, ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರ ಪಾಲಿಕೆ ಮಾಜಿ ಉಪ ಮೇಯರ್ ಅರ್ಜುನ್ ಹಾಗೂ ಇತರ ಮೂವರ ವಿರುದ್ಧ ಹಲ್ಲೆ, ಕೊಲೆಯತ್ನ ಆರೋಪ ಮಾಡಿ ಸುಜಿತ್‌ ಕುಮಾರ್ ಕುಮಾರ್ ಅವರು ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದರು.

ಘಟನೆಯ ವಿವರ:

ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಭಾನುವಾರ ರಾಜಕೀಯ ಮುಖಂಡರು, ಸಿನಿಮಾ ನಟರು, ಗೆಳೆಯರಿಗಾಗಿ ಕೈಗಾರಿಕಾ ಪ್ರದೇಶದಲ್ಲಿರುವ ಸೋಷಿಯಲ್ ಕ್ಲಬ್​ನಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ಸುಜಿತ್‌ಕುಮಾರ್ ಹಾಗೂ ರವಿಕುಮಾರ್ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುಜಿತ್ ಕುಮಾರ್ ಮತ್ತು ಅರ್ಜುನ್ ನಡುವೆ ಗಲಾಟೆ ನಡೆದಿದೆ. ಇಬ್ಬರೂ ಪರಸ್ಪರ ಮದ್ಯದ ಬಾಟಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಅರ್ಜುನ್ ಹಾಗೂ ಇತರೆ ಮೂವರು ಕೊಲೆ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಲಾಟೆಯಲ್ಲಿ ಸುಜಿತ್‌ಕುಮಾರ್ ಹಾಗೂ ರವಿಕುಮಾರ್​ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸುಜಿತ್ ಕುಮಾರ್ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮಾಜಿ ಉಪಮೇಯರ್ ಅರ್ಜುನ್ ಹಾಗೂ ಇತರ ಮೂವರ ಮೇಲೆ ಐಪಿಸಿ ಸೆಕ್ಷನ್‌ 307, 323, 504, 506, 34 ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details