ಮೈಸೂರು:ಕಾಡಿನಿಂದ ನಾಡಿನತ್ತ ಬರುತ್ತಿದ್ದ ವೇಳೆ ಅಡ್ಡಿಯಾದ ರೈಲ್ವೆ ಕಂಬಿಯನ್ನು ಆನೆಯೊಂದು ಆಕ್ರೋಶದಿಂದ ಮುರಿಯಲು ಯತ್ನಿಸಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಬೇಗೂರು ವಲಯದ ಕಾಟವಾಳು ಗ್ರಾಮದಲ್ಲಿ ನಡೆದಿದೆ.
ರೈಲ್ವೆ ತಡೆಗೊಡೆ ಮುರಿಯಲು ಗಜರಾಜನ ಸರ್ವ ಪಯತ್ನ: ಕ್ಯಾಮರಾದಲ್ಲಿ ದೃಶ್ಯ ಸೆರೆ - Bandipur Forest Range
ಕಾಡಿಂದ ನಾಡಿಗೆ ಹೆಜ್ಜೆ ಹಾಕುತ್ತಿದ್ದಾಗ ಅಡ್ಡಿಯಾದ ರೈಲ್ವೆ ಕಂಬಿಯನ್ನು ಆನೆಯೊಂದು ಆಕ್ರೋಶದಿಂದ ಮುರಿಯಲು ಯತ್ನಿಸಿದ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಕಾಟವಾಳು ಗ್ರಾಮದಲ್ಲಿ ನಡೆದಿದೆ.
ರೈಲ್ವೆ ಕಂಬಿ ಮುರಿಯಲು ಆಕ್ರೋಶ
ಆಹಾರ ಅರಸಿ ಕಾಡಿನಿಂದ ಬಂದ ಆನೆ, ಮರಳಿ ಕಾಡಿಗೆ ಹೋಗಲು ರೈಲ್ವೆ ಕಂಬಿ ತಡೆಯಾಗಿತ್ತು. ಗಜರಾಜನ ಆರ್ಭಟ ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಬೆಚ್ಚಿ ಬಿದ್ದಿದೆ. ಆನೆಗಳು ಒಳ ಬರದಂತೆ ಅರಣ್ಯ ಇಲಾಖೆಯು ಕಾಡಂಚಲ್ಲಿ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸಿದೆ. ಕಳೆದ ರಾತ್ರಿ ಹೇಗೋ ರೈತರ ಜಮೀನಿನತ್ತ ಬಂದಿದ್ದ, ಸಲಗ ಇಂದು ಮತ್ತೆ ಕಾಡಿಗೆ ಹೋಗಲಾರದೇ ಪರದಾಡಿತು.
Last Updated : Jul 21, 2020, 3:13 PM IST