ಮಂಗಳೂರು:ಕ್ರೈಸ್ತರು ಪ್ರೀತಿಯಿಂದ ಮತಾಂತರ ಮಾಡುತ್ತಾರೆ. ಯಾರಲ್ಲಿ ಯಾವುದರ ಕೊರತೆ ಇದೆಯೋ ಅದನ್ನು ಪ್ರೀತಿಯಿಂದ ನೀಡಿ ಮತಾಂತರಿಸುತ್ತಾರೆಯೇ ಹೊರತು ಬಂದೂಕು ತೋರಿಸಿ, ಬೆದರಿಸಿ ಮತಾಂತರ ಮಾಡುವುದಿಲ್ಲ ಎಂದು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೋ ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೇಳಿದರು.
ಅನ್ನ ಇಲ್ಲದವರಿಗೆ ಅನ್ನ ಕೊಟ್ಟು, ರಕ್ತ ಇಲ್ಲದವರಿಗೆ ರಕ್ತ ಕೊಟ್ಟು, ಮನೆ ಇಲ್ಲದವರಿಗೆ ಮನೆ ಕೊಟ್ಟು, ಕಣ್ಣಿಲ್ಲದವರ ಸೇವೆ ಮಾಡುವ ಮೂಲಕ ಮತಾಂತರ ಮಾಡುತ್ತೇವೆ. ಪ್ರೀತಿಯನ್ನು ಕೊಟ್ಟು ಮತಾಂತರ ಮಾಡುವವರು ಕ್ರೈಸ್ತರು. ಎಕೆ47 ತೋರಿಸಿ ಬೆದರಿಸಿ ಮತಾಂತರ ಮಾಡಬೇಕೆಂದಿಲ್ಲ. ಏಸು ಕ್ರಿಸ್ತರು ಪ್ರೀತಿ, ಶಾಂತಿಯಿಂದಿದ್ದು, ಸತ್ಯವನ್ನು ಹೇಳಿ ಸಮಾಜ ಕಟ್ಟಿ ಎಂದು ಸಂದೇಶ ಕೊಟ್ಟಿದ್ದಾರೆ. ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಅಲ್ಫಾನ್ಸೊ ಫ್ರಾಂಕೋ ಹೇಳಿದರು.